ಬೆಂಗಳೂರು: ನೈಟ್ ಕರ್ಫ್ಯೂ ವೇಳೆ ಪೊಲೀಸರೊಂದಿಗೆ ಕಿರಿಕ್ ತೆಗೆದ ವಾಹನ ಸವಾರರನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಓಮಿಕ್ರಾನ್ ನಿಯಂತ್ರಣದ ಹಿನ್ನೆಲೆ, ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಆದರೆ ಎರಡನೇ ದಿನದ ಕರ್ಫ್ಯೂ ಸಮಯದಲ್ಲಿ ಬೆಂಗಳೂರು ಟ್ರಿನಿಟಿ ಸರ್ಕಲ್ ನಲ್ಲಿ,
ಎಂದಿನಂತೆ ವಾಹನಗಳು ಓಡಾಟ ನಡೆಸಿದ್ದು, ವಾಹನಗಳನ್ನು ತಪಾಸಣೆ ನಡೆಸಿ ಪೊಲೀಸರು ಬಿಡುತ್ತಿದ್ದರು. ಇನ್ನೂ ಇದೇ ವೇಳೆ ಮಧ್ಯಪಾನ ಮಾಡಿ ಗಾಡಿ ಚಲಾವಣೆ ಮಾಡುತ್ತಿದ್ದವರ ಗಾಡಿ ಸೀಜ್ ಮಾಡಿದ್ದು, ವಾಹನ ಸವಾರರು ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಕಿರಿಕ್ ಮಾಡಿದ ಸವಾರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
