ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿರಣ ಸ್ಟುಡಿಯೋ ಇಂದು ಇನ್ನೊಂದು ಮೈಲುಗಲ್ಲು ಸಾಧಿಸಿದ್ದು ಕಿರಣ ಪ್ರಾಪ್ ಸ್ಟುಡಿಯೋ ಪ್ರಾರಂಭಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಅಂದರೆ ಕಿರಣ ಬಾಕಳೆಯವರು ಸಮಯಕ್ಕೆ ತಕ್ಕ ಬದಲಾವಣೆಗಳನ್ನು ಜನರಿಗೆ ತಲುಪಿಸುವ ಮುಖಾಂತರ ಪ್ರಸಿದ್ಧರಾಗಿದ್ದು ಒಂದೇ ಕ್ಯಾಮರಾ ಮೂಲಕ ವೃತ್ತಿ ಆರಂಭಿ ಅತ್ಯಂತ ಜನಪ್ರಿಯ ಆಗುವುದರ ಜೊತೆಗೆ ಫೋಟೋಗ್ರಾಫರ್ ಕ್ಷೇತ್ರದಲ್ಲಿ ಪಯೋನಿಯರ್ ಸಹ ಆಗಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಕೇಂದ್ರ ಸಚಿವರಾದಂತಹ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಕಿರಣ್ ಪ್ರಾಪ್ ಸ್ಟುಡಿಯೋ ಉದ್ಘಾಟಿಸಿ ಅವರು ಮಾತನಾಡಿದರು. ಈದ್ಗಾ ಮೈದಾನದ ಹೋರಾಟಗಾದಲ್ಲಿ ಅದು ಗೋಲಿಬಾರ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಟದ ವಿವಿಧ ಆಯಾಮಗಳ ವಿಭಿನ್ನವಾಗಿ ಪೋಟೋ ತೆಗೆದವರು ಕಿರಣ ಬಾಕಳೆ ಜೊತೆಗೆ ಹೋರಾಟಗಾರರಿಗೂ ಸಹ ಆ ಮೂಲಕ ಎಚ್ಚರಿಕೆ ಮತ್ತು ಹೋರಾಟದ ಕಿಚ್ಚು ಹಚ್ಚಿದವರು. ಒಂದು ಗೋಲಿಬಾರ್ ಪೋಟೋ ತುಂಬಾ ಫೇಮಸ್ ಆಗುತಿದ್ದವು ಆ ಮೂಲಕ ಇಂದು ದೊಡ್ಡ ಪ್ರಮಾಣದಲ್ಲಿ ವೃತ್ತಿಪರ ಫೋಟೋಗ್ರಾಫರ್ ಆಗಿದ್ದಾರೆ. ಇವರ ಜೊತೆಗೆ ಇವರ ಮಕ್ಕಳು ಸಹ ಇಂದು ಇದೇ ಫೋಟೋಗ್ರಾಫರ್ ವೃತ್ತಿಯಲ್ಲಿ ಆಯ್ಕೆ ಮಾಡಿದ್ದಾರೆ ಸಂತಸದ ವಿಷಯ ಎಂದರು.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ವಿಶೇಷ ಅತಿಥಿಗಳಾಗಿ ಆಗಮಿಸಿದ ವಿ. ಆರ್ ಎಲ್ ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ್ ಮಾತನಾಡಿ ಬಹಳ ಕಷ್ಟಪಟ್ಟು ಈ ವ್ಯಕ್ತಿ ಎತ್ತರಕ್ಕೆ ಬೆಳೆದಿದ್ದಾನೆ ಅವರ ಪ್ರಾಮಾಣಿಕ ಬೆಳವಣಿಗೆ ಇನ್ನೊಬ್ಬರಿಗೆ ಮಾದರಿಯಾಗಿದೆ ಅಂದರು. ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ಹಾಗೂ ಪ್ರಸಾದ್ ಅಬ್ಬಯ್ಯ ಆಗಮಿಸಿ ಶುಭ ಕೋರಿದರು. ಈ ಕಾರ್ಯಕ್ರಮಕ್ಕೆ ವೆಂಕಟೇಶ್ ಕಾಟ್ವೆ, ಪ್ರಕಾಶ್ ಬುರಬುರೆ, ವಿಜಯ ಬಾಕಳೆ ವಿನಾಯಕ್ ಬಾಕಳೆ ಶೋಭಾ ಬಾಕಳೆ ರವೀಂದ್ರ ಕಾಟಿಗರ, ಆನಂದ ರಾಜೋಳ್ಳಿ ಹಾಗೂ ಅನೇಕರು ಭಾಗವಹಿಸಿದ್ದರು.