ಬೆಂಗಳೂರು:- ಕಿಯೋನಿಕ್ಸ್ ವೆಂಡರ್ಸ್ ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
SSLC, PUC, ಡಿಗ್ರಿ ಪಾಸಾಗಿದ್ಯಾ!? ಹಾಗಿದ್ರೆ ಇಲ್ಲಿದೆ ಭರ್ಜರಿ ಉದ್ಯೋಗ: ಕೂಡಲೇ ಸಂದರ್ಶನಕ್ಕೆ ಹಾಜರಾಗಿ!
ಇಲ್ಲಿನ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಕಿಯೋನಿಕ್ಸ್ ಕಚೇರಿ ಎದುರು ಭಾರೀ ಹೈಡ್ರಾಮಾ ನಡೆದಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಈಗಾಗಲೇ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಈ ಹಿಂದೆ ದಯಾಮರಣ ಕೋರಿದ್ದ ಕಿಯೋನಿಕ್ಸ್ ವೆಂಡರ್ಸ್ ಇದೀಗ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್ ಸಹ ಬರೆದುಕೊಂಡಿದ್ದರು.
ಬಾಕಿ ಬಿಲ್ ಪಾವತಿ ಮಾಡುವುದಾಗಿ ಈ ಹಿಂದೆ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಭರವಸೆ ಕೊಟ್ಟಿದ್ದರು. ಇದೀಗ ವಿಳಂಭ ಧೋರಣೆ ಖಂಡಿಸಿ ಇಂದು ಪ್ರತಿಭಟನೆ ಕರೆ ಕೊಟ್ಟಿದ್ದಾರೆ. ಕಚೇರಿಯ ಮುಂಭಾಗ ವೆಂಡರ್ಸ್ ಪ್ರತಿಭಟನೆ ಬೆನ್ನಲ್ಲೇ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ವೇಳೆ ವೆಂಡರ್ಸ್ ಕಚೇರಿಗೆ ಬರುತ್ತಿದ್ದ ವ್ಯಕ್ತಿಯಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಕಚೇರಿಗೆ ಹೋಗ್ತಾ ಇದ್ದೀನಿ ಅಂದ್ರೂ ಬಿಡದೇ ಸದಾಶಿವನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಕಿಯೋನಿಕ್ಸ್ ವೆಂಡರ್ಸ್ ಡೆತ್ ನೋಟ್ ನಿಂದ ಸರ್ಕಾರ ಮತ್ತೆ ಮುಜುಗರಕ್ಕೆ ಒಳಗಾದಂತಿದೆ.