ಬೆಂಗಳೂರು:– ಮಾಜಿ ಸಚಿವ ಎಚ್ ಡಿ ರೇವಣ್ಣ ಎಸ್ ಐ ಟಿಯ ಸುಳಿಯಲ್ಲಿ ಸಿಲುಕಿದ್ದು, ವಿಚಾರಣೆ ಮೇಲೆ ವಿಚಾರಣೆ ಎದುರಿಸುವಂತಾಗಿದೆ. ಕಿಡ್ನ್ಯಾಪ್ ಕೇಸ್ ಸಂಬಂಧ ಎಸ್ ಐಟಿ ವಿಚಾರಣೆಗೆ ಗರಂ ಆಗಿದ್ದು, ಸತೀಶ್ ಬಾಬಣ್ಣನನ್ನ ಬಾಡಿ ವಾರೆಂಟ್ ಮೇಲೆ ಕರೆತಂದಿದ್ದಾರೆ. ಈ ಬಗ್ಗೆ ಇವತ್ತಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಅಕ್ರಮ ಬೋರ್ವೆಲ್ ಸದ್ದು.. ಒಂದುವರೆ ತಿಂಗಳಲ್ಲಿ ದಾಖಲಾದ ಪ್ರಕಣಗಳೆಷ್ಟು ಗೊತ್ತಾ..!?
ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡ್ನ್ಯಾಪ್ ಕೇಸಲ್ಲಿ ಅರೆಸ್ಟ್ ಆಗಿ ಇಂದಿಗೆ ಎರಡು ದಿನ.. ನಿನ್ನೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ರು.. ನಿನ್ನೆಯಿಂದ ರೇವಣ್ಣ ವಿಚಾರಣೆ ಆರಂಭಿಸಿರೊ ಎಸ್ ಐ ಟಿ, ಕೆ ಆರ್ ನಗರ ಕಿಡ್ನ್ಯಾಪ್ ಕೇಸ್ ಸಂಭಂದ ಹಲವಾರು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮಗನ ಮೇಲೆ ಸಂತ್ರಸ್ತೆ ಅತ್ಯಾಚಾರ ಪ್ರಕರಣ ದಾಖಲಾಗಬಹುದು ಅಂತಾ ಮಹಿಳೆಯನ್ನ ಕಿಡ್ನ್ಯಾಪ್ ಮಾಡಿದ್ರಾ.. ಕಿಡ್ನ್ಯಾಪ್ ಮಾಡಿ ಮಹಿಳೆಯನ್ನ ತೋಟದ ಮನೆಯಲ್ಲಿಟ್ಟು ಕಿರುಕುಳ ನೀಡಿದ್ದೀರ ಅಂತಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಎಸ್ ಐ ಟಿ ಅಧಿಕಾರಿಗಳ ಪ್ರಶ್ನೆಗೆ ರೇವಣ್ಣ ಗರಂ ಆಗಿದ್ದು, ನಾನು ಯಾವ ಕಿಡ್ನ್ಯಾಪ್ ಮಾಡಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ರಾಜಕೀಯ ದುರುದ್ದೇಶದಿಂದ ಎಫ್ ಐ ಆರ್ ಮಾಡಿದ್ದೀರ. ನೀವು ಹೇಳಿದ್ದಕ್ಕೆಲ್ಲಾ ನಾನು ಸಹಿ ಹಾಕೋದಿಲ್ಲ. ನಾನು ಹೇಳಿರೋದನ್ನ ಬರೆದುಕೊಂಡು ಬನ್ನಿ ಸಹಿ ಹಾಕ್ತೇನೆ ಅಂತಾ ಎಸ್ ಐ ಟಿ ಅಧಿಕಾರಿಗಳ ಮುಂದೆ ಗರಂ ಆಗಿದ್ದಾರೆ.. ಸ್ಟೇಟ್ ಮೆಂಟ್ ಗೆ ಸಹಿ ಹಾಕಲು ರೇವಣ್ಣ ನಿರಾಕರಿಸಿದ್ದಾರೆ ಅನ್ನೊ ಮಾಹಿತಿಗಳು ಲಭ್ಯವಾಗಿವೆ..
ಇನ್ನು ಕೆ ಆರ್ ನಗರ ಕಿಡ್ನ್ಯಾಪ್ ಪ್ರಕರಣ ಸಂಬಂಧ ಎಸ್ ಐಟಿ ಅಧಿಕಾರಿಗಳು ಎ೨ ಆರೋಪಿ ಸತೀಶ್ ಬಾಬಣ್ಣನನ್ನ ಬಾಡಿ ವಾರೆಂಟ್ ಮೂಲಕ 8 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಕೆ ಆರ್ ನಗರ ಜೈಲಿನಿಂದ ಆರೋಪಿಯನ್ನ ಮೂರು ಗಂಟೆ ವೇಳೆಗೆ ಕೋರ್ಟ್ ಗೆ ಕರೆತರಲಾಯ್ತು.. ಸತೀಶ್ ಬಾಬಣ್ಣನೇ ಸಂತ್ರಸ್ತ ಮಹಿಳೆಯನ್ನ ಕರೆದೊಯ್ದು ರೇವಣ್ಣ ಬಳಿ ಬಿಟ್ಟಿದ್ದಾನೆ. ಆರೋಪಿ ಪತ್ನಿ ಭವಾನಿ ಬಳಿಯೂ ಮಾತನಾಡಿಸಿದ್ದಾನೆ. ಪ್ರಕರಣದಲ್ಲಿ ವಿಚಾರಣೆ ಅಗತ್ಯವಿರೋದ್ರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಅಂತಾ ಮನವಿ ಮಾಡಿದರಾದ್ರು ಕೊನೆಗೆ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಪ್ರಕರಣದ ಎ೧ ಎ೨ ಇಬ್ಬರೂ ಆರೋಪಿಗಳನ್ನ ಪರಸ್ವರ ಎದುರು ಬದುರು ಕೂರಿಸಿ ವಿಚಾರಣೆ ನಡೆಸಲು ಎಸ್ ಐ ಟಿ ಸಿದ್ಧತೆ ನಡೆಸಿದೆ..
ಬೆಳಗ್ಗೆ ರೇವಣ್ಣ ಪರ ವಕೀಲರು ಎಸ್ ಐಟಿ ಕಚೇರಿಯಲ್ಲಿ ಸುಮಾರು 1 ಗಂಟೆಗಳ ಕಾಲ ರೇವಣ್ಣ ಜೊತೆ ಚರ್ಚೆ ನಡೆಸಿದ್ದಾರೆ. ಜಾಮೀನಿಗಾಗಿ ಅರ್ಜಿ, ಇನ್ವೆಸ್ಟಿಗೇಷನ್ ಬಗ್ಗೆ ರೇವಣ್ಣ ಮಾತನಾಡಿದ್ದಾರೆ ಎನ್ನಲಾಗಿದ್ದೆ.