ಕಲಬುರಗಿ: ಲೋಕಸಭಾ ಚುನಾವಣೆ ರಣಕಣ ರಂಗೇರಿದ ಹಿನ್ನಲೆ ಮಲ್ಲಿಕಾರ್ಜುನ ಖರ್ಗೆ ತವರೂರು ಕಲಬುರಗಿಯಿಂದ್ಲೇ ಪ್ರಧಾನಿ ಮೋದಿ ರಣಕಹಳೆ ಮೊಳಗಿಸಲಿದ್ದಾರೆ ಅಂತ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಜಾಧವ್,
ಮಾರ್ಚ್ 16 ರಂದು ಮಧ್ಯಾಹ್ನ 2 ಕ್ಕೆ ನಮೋ ಆಗಮಿಸಲಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡ್ತಾರೆ ಅಂತ ಹೇಳಿದ್ರು.ಈ ಪಿಎಂ ಕಾರ್ಯಕ್ರಮದಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆಯಿದೆ ಅಂತ ಹೇಳಿಕೆ ನೀಡಿದ್ರು.