ಕೋಲಾರ:- ಇಲ್ಲಿನ ಪೊಲೀಸರು ಕಾರ್ಯಚರಣೆ ನಡೆಸಿ ಕಳ್ಳತನವಾಗಿದ್ದ ಶ್ವಾನವನ್ನು ಪತ್ತೆ ಮಾಡಿದ್ದಾರೆ.
ನಗರದ ಗಲ್ ಪೇಟೆ ಪೊಲೀಸರು ಕಾರ್ಯಾಚರಣೆ ಮಾಡಿ, ಶಿವಗಿರಿ ಮಠದ ಸಂತೋಷ ಸಿಂಗ್ ಎಂಬುವರಿಗೆ ಸೇರಿದ ಸಿಜಿ, ಬ್ಲೂ ಐಸ್ ತಳಿಯ 25,000 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಖದೀಮರು ಕಳ್ಳತನ ಮಾಡಿದ್ದರು. ಚಿನ್ನಾಪುರ ಗ್ರಾಮದ ಶಶಿ ಹಾಗೂ ಗಣೇಶ್ ಎಂಬುವರಿಂದ ನಾಯಿ ಕಳ್ಳತನ ಮಾಡಲಾಗಿತ್ತು. ಕಾರ್ಯಾಚರಣೆ ಮಾಡಿ ನಾಯಿ ಹಾಗೂ ಆರೋಪಿಗಳನ್ನು ಪೊಲೀಸರು ಮತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ನಾಯಿ ಸಿಕ್ಕ ತಕ್ಷಣ ನಾಯಿಯನ್ನು ಹಿಡಿದು ಮಾಲೀಕರು ಮುದ್ದಾಡಿದ್ದಾರೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)