ಬಳ್ಳಾರಿ:- ತಡ ರಾತ್ರಿ ಬೈಕ್ ಕಳತನಕ್ಕೆ ಕಳ್ಳ ಯತ್ನಿಸಿದ್ದು, ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳ್ಳಾರಿ ಜಿಲ್ಲೆಯ ಕುಡುತಿನ ಪಟ್ಟಣದಲ್ಲಿ ಘಟನೆ ಜರುಗಿದೆ
ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ ಕಳ್ಳತನಕ್ಕೆ ಯತ್ನಿಸಲಾಗಿದೆ. ಮೋತಿ ವೀರೇಶ್ ಎಂಬುವರಿಗೆ ಸೇರಿದ ಬೈಕ್ ಇದಾಗಿದೆ ಎನ್ನಲಾಗಿದೆ. ಬೈಕ್ ಲಾಕ್ ತೆಗೆದು ತಳ್ಳಿಕೊಂಡು ಪರಾರಿಯಾಗಲು ಯತ್ನಿಸಲಾಗಿದೆ. ಬೈಕ್ ಕಳ್ಳತನ ವಿಷಯ ಗೊತ್ತಾಗ್ತಿದಂತೆ ಯುವಕರು ಕಳ್ಳನ ಬೆನ್ನಟಿದ್ದಾರೆ. ಕೂಡಲೇ ಎಚ್ಚೆತ್ತ ಕಳ್ಳರು, ವೇಣಿವೀರಾಪುರ ಬಳಿ ಬೈಕ್ ಬಿಟ್ಟು ಪರಾರಿ ಆಗಿದ್ದಾರೆ. ಇಬ್ಬರೂ ಖದೀಮರಿಂದ ಪಲ್ಸರ್ ಬೈಕ್ ಕಳ್ಳತನಕ್ಕೆ ಯತ್ನಿಸಲಾಗಿದೆ ಎನ್ನಲಾಗಿದೆ. ಖದೀಮ ಕಳ್ಳತನ ಕೈಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕುಡಿತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.