ಧಾರವಾಡ: ಸೈಬರ್ ಕ್ರೈಂ ಎನ್ನುವುದು ಇದೀಗ ಹೆಮ್ಮರವಾಗಿ ಹಬ್ಬಿದೆ. ಸಾಮಾನ್ಯ ಜನರಿಗಷ್ಟೇ ಸೈಬರ್ ಕ್ರೈಂನಿಂದ ಮೋಸವಾಗುತ್ತಿತ್ತು. ಆದರೆ, ಇದೀಗ ಕ್ರೈಂ ಮಾಡುವವರನ್ನು ಪತ್ತೆ ಮಾಡುವ ಪೊಲೀಸರಿಗೂ ಸೈಬರ್ ಕ್ರೈಂ ತನ್ನ ಕೈ ಚಳಕ ತೋರಿಸುತ್ತಿದೆ. ಹೌದು! ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಎಂಬುವವರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 8.25 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಈ ಸಂಬಂಧ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ಸ್ಪೆಕ್ಟರ್ ದಯಾನಂದ ಅವರು ವೈಯಕ್ತಿಕವಾಗಿ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳದೇ ಇದ್ದರೂ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಬ್ಯಾಂಕ್ನವರು ನೆಟ್ ಸೆಕ್ಯುರಿಟಿ ಬಳಸದೇ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದ ಸಂದರ್ಭದಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ 50 ಸಾವಿರ ರೂಪಾಯಿಯನ್ನು 12 ಬಾರಿ, 45 ಸಾವಿರ ರೂಪಾಯಿಯನ್ನು ಮೂರಿ ಬಾರಿ, 25 ಸಾವಿರ ರೂಪಾಯಿಯನ್ನು ಎರಡು ಬಾರಿ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.