ಬೆಂಗಳೂರು: ಕೆಜಿಎಫ್ – 2 ಸಿನಿಮಾದ ಟೀಸರ್ ಬಿಡುಗಡೆ ಸಂಬಂಧ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಬಾರಿ ಮತ್ತೆ ಕೊವಿಡ್ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಬಂದು ಬರ್ತ್ಡೇ ಆಚರಣೆ ಮಾಡುವುದು ಸರಿಯಲ್ಲ ಅನಿಸುತ್ತಿದೆ.
ಹೀಗಾಗಿ ಎಲ್ಲರೂ ಎಲ್ಲಿದ್ದಿರೋ ಅಲ್ಲಿಂದಲೇ ವಿಶ್ ಮಾಡಿ ಸಾಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ಟೀಸರ್ ರಿಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹುಟ್ಟು ಹಬ್ಬಕ್ಕೆ ಟೀಸರ್ ಬಿಡುಗಡೆ ಆಗುತ್ತದೆ ಎಂದು ಸಾಕಷ್ಟು ಅಭಿಮಾನಿಗಳು ಅಂದುಕೊಂಡಿದ್ದರೂ, ಆದರೆ ಅಂದು ಟೀಸರ್ ಬಿಡುಗಡೆ ಆಗುವುದಿಲ್ಲ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದು ಅಭಿಮಾನಿಗಳಿಗೆ ಯಶ್ ಮಾಹಿತಿ ನೀಡಿದ್ದಾರೆ.
