ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತೀವ್ರ ಮುಜುಗರಕ್ಕೆ ಸಿಲುಕಿಸಿದ್ದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಸಿಐಡಿಗೆ ನೀಡಿ ಸರ್ಕಾರ ಆದೇಶಿಸಿದೆ. ಈಗಾಗಲೇ ಕಲಬುರಗಿ ಪೋಲೀಸರಿಂದ ಕಿಂಗ್ ಪಿನ್ RD ಪಾಟೀಲ್ ಸೇರಿ ಹಲವರು ಅರೆಸ್ಟಾಗಿದ್ದಾರೆ.
ವಿಶ್ವವಿದ್ಯಾಲಯ ಠಾಣೆ ಅಶೋಕ ನಗರ ಠಾಣೆ ಹಾಗು ಅಫಜಲಪುರ ಠಾಣೆಗಳಲ್ಲಿ ಪರೀಕ್ಷಾ ಅಕ್ರಮದ ಕೇಸ್ ದಾಖಲಾಗಿವೆ.ಇದೀಗ ತೀವ್ರ ತನಿಖೆಯ ನಂತ್ರ ಇನ್ನೂ ಹಲವು ಕುಳಗಳು ಅಂದರ್ ಆಗಲಿವೆ ಅನ್ನೋ ಮಾತುಗಳು ಕೇಳಿಬರ್ತಿವೆ..