ಕಲುಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣದ ಆರೋಪಿ ಇಂಜಿನಿಯರ್ ರುದ್ರಗೌಡನಿಗೆ ಇದೀಗ ಮೈತುಂಬ ಸಾಲ ಕಾರಣ ರಮ್ಮಿ ಆಡೋ ಚಟವಂತೆ.. ಹೌದು CID ಪೋಲೀಸರಿಂದ ಬಂಧಿತನಾಗಿರುವ ಆರೋಪಿ ರುದ್ರಗೌಡ ಆನ್ ಲೈನ್ ರಮ್ಮಿ ಆಡಿ ಆಡಿ ಎಲ್ಲೆಡೆ ಸಾಲ ಮಾಡಿದ್ದಾನಂತೆ..
ಮೊದಲು ಖಯಾಲಿ ಆಗಿದ್ದ ಆಟ ಬರುಬರುತ್ತಾ ಚಟವಾಗಿ ಪರಿವರ್ತನೆ ಆಗಿದೆ.. ವಿಚಾರಣೆ ವೇಳೆ ಈ ಮಾಹಿತಿ ಬಯಲಾಗಿದೆ.. ಆರಂಭದಲ್ಲಿ ಅಕ್ರಮವಾಗಿ ಗಳಿಸಿದ ಹಣ ಜೂಜಿಗಿಟ್ಟು ನಂತ್ರ ಸಾಕಾಗದ್ದಕ್ಕೆ ಮೈತುಂಬ ಸಾಲ ಮಾಡಿಕೊಂಡ ಎನ್ನಲಾಗಿದೆ.