ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ಕಾವ್ಯಾ ಗೌಡ (Kavya Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದೀಗ ಸೀಮಂತ ಶಾಸ್ತ್ರದ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.
ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ಬೆಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ನಡೆದಿದೆ.
ಕಾರ್ಯಕ್ರಮದಲ್ಲಿ ಲೈಟ್ ಬಣ್ಣದ ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ.
2021ರಲ್ಲಿ ಉದ್ಯಮಿ ಸೋಮಶೇಖರ್ ಜೊತೆ ಕಾವ್ಯಾ ಮದುವೆಯಾಗಿದ್ದಾರೆ.
ಗುರುಹಿರಿಯರು ಸಮ್ಮತಿಸಿದ ಮದುವೆಗೆ ಕಾವ್ಯಾ ಗ್ರೀನ್ ಸಿಗ್ನಲ್ ನೀಡಿದ್ದರು.
ಕಳೆದ ವರ್ಷ ಹೊಸ ಮನೆ ಕಟ್ಟಿ ಗೃಹಪ್ರವೇಶ ಕೂಡ ಅದ್ದೂರಿಯಾಗಿ ಮಾಡಿದ್ದರು.
ಹೊಸ ಮನೆಗೆ ಕಾಲಿಟ್ಟ ಸಂಭ್ರಮದ ಬೆನ್ನಲ್ಲೇ ಈಗ ಹೊಸ ಅತಿಥಿ ಆಗಮನವಾಗುತ್ತಿರೋ ಖುಷಿಯಲ್ಲಿದ್ದಾರೆ.