ಮಂಗಳೂರು:- ಸಚಿವ ಜಮೀರ್ ಅಹ್ಮದ್ ರಾಜೀನಾಮೆಗೆ ನಳಿನ್‌ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು,ವಿವಾದಿತ ಹೇಳಿಕೆ ನೀಡಿಡುವ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಬೇಕು. ಜಮೀರ್ ಅವರು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆ.

ಸ್ಪೀಕರ್ ಸ್ಥಾನ ಜಾತಿ, ಧರ್ಮದ ಹೊರತಾಗಿ ಇರುವ ಹುದ್ದೆಯಾಗಿದೆ. ಆ ಸ್ಥಾನವನ್ನು ಅವರು ಮತೀಯ ದೃಷ್ಟಿಯಿಂದ ನೋಡಿದ್ದಾರೆ. ಸ್ಥಾನದ ಗೌರವ ಕಡಿಮೆಯಾಗುವಂತೆ ಮಾತನಾಡಿದ್ದಾರೆ ಎಂದರು.

ಈ ಹೇಳಿಕೆಯು ಅವರ ಮಾನಸಿಕತೆಯನ್ನು ತೋರಿಸುತ್ತದೆ. ಮತಿಭ್ರಾಂತಿಯಿಂದ ಜಮೀರ್ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಂದ ರಾಜೀನಾಮೆ ಪಡೆಯಲಿ’ ಎಂದರು.

Share.