ಶಿವಮೊಗ್ಗ:- ಅಭಿವೃದ್ಧಿ ಹೊಂದಿದ ರಾಜ್ಯವೆಂದರೆ ಕರ್ನಾಟಕ ಎಂದು ನಿತಿನ್ ಗಡ್ಕರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅತ್ಯುತ್ತಮ ನಾಡಗೀತೆ ಕರ್ನಾಟಕ ರಾಜ್ಯದಾಗಿದೆ. ಈ ಹಾಡು ಕೇಳಿ ನನಗೆ ತುಂಬಾ ಖುಷಿ ಆಯ್ತು. ಈ ಹಾಡು ರಚನೆ ಮಾಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ರಾಜ್ಯವೆಂದರೆ ಕರ್ನಾಟಕ. ರಾಜ್ಯ ಐಟಿ ಬಿಟಿ ಮೂಲಕ ಗಮನ ಸೆಳೆದಿದೆ. ಈ ಮೂಲಕ ದೇಶದ ಅಭಿವೃದ್ಧಿ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. 2014 ರಿಂದ ಕಾರ್ಖಾನೆಯಲ್ಲಿ ವಿದ್ಯುತ್ ಮತ್ತು ಇಂಧನ ಉತ್ಪಾದನೆಗೆ ಬಳಕೆ ಮಾಡಲಾಗಿದೆ. ಭತ್ತದ ಹೊಟ್ಟಿನ ಮೂಲಕ ವಿಮಾನದ ಇಂಧನ ಉತ್ಪಾದನೆ. ಏಥಿನಾಲ್ ಇಂಧನ ಬೇಕು. ಏಥಾನಾಲ್ನ 400 ಪಂಪ್ಗಳು ದೇಶದಲ್ಲಿ ಓಪನ್ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಸಾಥ್ ನೀಡಬೇಕಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಸ್ಮಾರ್ಟ್ ಆಗಲಿದೆ ಎಂದು ತಿಳಿಸಿದರು.
ಅಮೇರಿಕ ಹೈವೇ ಮಾದರಿಯಲ್ಲಿ ರಾಜ್ಯದ ಹೈವೇಗಳು 2028 ರಲ್ಲಿ ಪೂರ್ಣ ಅಭಿವೃದ್ದಿ ಆಗಲಿದೆ. ತುಮಕೂರು-ಶಿವಮೊಗ್ಗ ಹೈವೇ 6,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಶೀಘ್ರದಲ್ಲೇ ಈ ಹೈವೇ ಕಾಮಗಾರಿ ಪೂರ್ಣ ಆಗಲಿದೆ. ಮೈಸೂರು-ಮಡಿಕೇರಿ ಹೈವೇ ಯೋಜನೆ ಶೀಘ್ರದಲ್ಲಿ ಆರಂಭ ಆಗಲಿದೆ ಎಂದರು