ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆ ಕಮಲ್ ಹಾಸನ್ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಸುಹಾಸಿನಿ, ಖುಷ್ಬೂ, ಆಮೀರ್ ಖಾನ್, ಸೂರ್ಯ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಕಮಲ್ ಹಾಸನ್ ಹುಟ್ಟು ಹಬ್ಬ (Birthday). ಈ ಸಡಗರವನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಅವರ ನಟನೆಯ 234ನೇ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಥಗ್ ಲೈಫ್’ (Thug’s Life) ಎಂದು ಹೆಸರಿಡಲಾಗಿದೆ. ಶೀರ್ಷಿಕೆಯ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಮೂಡಿಸಿದೆ.
ಜೈಲರ್ ಸಿನಿಮಾದ ಯಶಸ್ಸಿನ ನಂತರ ತಮಿಳಿನಲ್ಲಿ ಶಿವರಾಜ್ ಕುಮಾರ್ (Shivaraj Kumar) ಬೇಡಿಕೆ ಹೆಚ್ಚಾಗಿದೆ. ಜೈಲರ್ ಸಿನಿಮಾದ ಜೊತೆ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದರು. ಇದೀಗ ಕಮಲ್ ಹಾಸನ್ ನಟನೆಯ ಹೊಸ ಸಿನಿಮಾದಲ್ಲೂ ಶಿವರಾಜ್ ಕುಮಾರ್ ಪಾತ್ರ ಮಾಡಲಿದ್ದಾರಂತೆ. ಈಗಾಗಲೇ ಶಿವಣ್ಣ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನುವ ಸುದ್ದಿಯಿದೆ.