ಕಲಬುರಗಿ: ಲಾರಿ-ಜೀಪ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಫಜಲಪುರ ಪಟ್ಟಣದ ಹೊರವಲಯದಲ್ಲಿ ಘಟನೆ ನಡೆದಿದ್ದು ಮೃತರೆಲ್ಲ ಮಾಡ್ಯಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಸಂತೋಷ್ ಶಂಕರ್ ಸಿದ್ದಮ್ಮ ಮತ್ತು ಹುಚ್ಚಪ್ಪ ಮೃತ ದುರ್ದೈವಿಗಳು.30 ವರ್ಷದ ಪೂಜಾ ಸ್ತಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ..ಮಲ್ಲಾಬಾದ್ ಕಡೆಗೆ ಹೊರಟಿದ್ದ ಜೀಪ್ ಗೆ ಕಲಬುರಗಿ ಕಡೆಯಿಂದ ಬರ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.. ಅಫಜಲಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.