ರಾಮನಗರ : ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರಕ್ಕೆ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಹೈವೋಲ್ಟೇಜ್ ಕ್ಷಣವಾಗಿದ್ದ ಚನ್ನಪಟ್ಟಣದಲ್ಲಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಹೊಡೆದಿದ್ದು, ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತೆ ಸೋತಿದ್ದಾರೆ. ದೋಸ್ತಿಗಳ ವಿರುದ್ಧ ತೊಡೆ ತಟ್ಟಿ ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ್ಯೋಗೇಶ್ವರ್ ಉಪಕದನ ಗೆದ್ದ ಸಂಭ್ರಮದಲ್ಲಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಸೋಲಿನ ರುಚಿ ಕಂಡಿದ್ದ ಸಿ.ಪಿ,ಯೋಗೇಶ್ವರ್ ಈ ಬಾರಿ ಭರ್ಜರಿ ಮತಗಳಿಂದ ಜಯಗಳಿಸಿದ್ದಾರೆ. ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ಗರಿಷ್ಟವೆಂದರೆ 85 ಸಾವಿರ ಮತಗಳ ಪಡೆದಿದ್ದ ಯೋಗೇಶ್ವರ್ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಪಡೆದಿದ್ದಾರೆ.
ಇನ್ನೂ ಎರಡು ಬಾರಿ ಪರಾಜಿತರಾಗಿದ್ದ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆಲುವಿನ ಹುಮ್ಮಸ್ಸಿನಲ್ಲೇ ಇದ್ದರು. ನಾಮಪತ್ರ ಸಲ್ಲಿಸಿದ ದಿನದಿಂದಲೂ ಪ್ರತಿಯೊಂದು ಗ್ರಾಮಗಳಲ್ಲೂ ಪ್ರಚಾರ ನಡೆಸಿದ್ದರು. ಆದರೆ ಗೆಲುವಿನ ನಿರೀಕ್ಷೆಯಲ್ಲಿದ್ದ ನಿಖಿಲ್ ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ. ಈ ಹಿಂದೆ ಮಂಡ್ಯದಿಂದ ಲೋಕಸಭೆ ಚುನಾವಣೆ, ರಾಮನಗರದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ನಿಖಿಲ್ ಇದೀಗ ಮೂರನೇ ಪ್ರಯತ್ನದಲ್ಲಿಯೂ ವಿಫಲರಾಗಿದ್ದಾರೆ.
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ NDAಗೆ ಹಿನ್ನಡೆ! ಕಾರಣವಾದ ಪ್ರಮುಖ ಅಂಶಗಳಾದ್ರೂ ಏನು..?
ಸೈನಿಕ ಗೆಲುವಿಗೆ ಕಾರಣಗಳೇನು..?
ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪವು ಈ ಬಾರಿ ಸಿಪಿ ಯೋಗೇಶ್ವರ್ ಕೈ ಹಿಡಿದಿರಬಹುದು. ಕ್ಷೇತ್ರದಲ್ಲಿ ಯೋಗೇಶ್ವರ್ಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸಿದೆ. ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ಪರಿಣಾವು ಆಗಿರಬಹುದು. ಡಿಕೆ ಸಹೋದರರು ಯೋಗೇಶ್ವರ್ ಬೆನ್ನಿಗೆ ನಿಂತಿದ್ದರು.
ನಿಖಿಲ್ ಸೋಲಿಗೆ ಕಾರಣವಾದ ಅಂಶಗಳೇನು?
ನಿಖಿಲ್ಗೆ ಹಿನ್ನಡೆಗೆ ಕುಟುಂಬ ರಾಜಕಾರಣವೂ ಕಾರಣವಾರಬಹುದು. ಅಲ್ಲದೇ ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡಿರುವುದು. ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಂಡ್ಯ ಸಂಸದ ಸ್ಥಾನಕ್ಕೆ ಹೋಗಿದ್ದು. ಯೋಗೇಶ್ವರ್ಗೆ ಟಿಕೆಟ್ ಕೊಡಲಿಲ್ಲ ಎಂಬ ಅನುಕಂಪ ನಿಖಿಲ್ಗೆ ಹಿನ್ನಡೆ ಆಯ್ತು.. ತಳ ಮಟ್ಟದಲ್ಲಿ ಬಿಜೆಪಿಯಿಂದ ಅಷ್ಟಾಗಿ ಸಹಕಾರ ಸಿಗದೇ ಹೋಗಿರುವುದು.