ವನ್ಯಜೀವಿಗಳ ಸುಂದರ ದೃಶ್ಯಗಳನ್ನು ನೋಡಲು ಯಾರಿಗೆ ಇಷ್ಟ ಇಲ್ಲ ಹೇಳಿ…? ಇದೇ ಕಾರಣಕ್ಕೆ ಸಾಕಷ್ಟು ಉತ್ಸಾಹಿಗಳು ವನ್ಯಜೀವಿ ವೀಕ್ಷಣೆಗೆ ತೆರಳುತ್ತಾರೆ ಮತ್ತು ಬಲು ತಾಳ್ಮೆಯಿಂದಲೇ ಕಾದು ಅಪರೂಪದ ದೃಶ್ಯವನ್ನು ಸೆರೆ ಹಿಡಿಯುತ್ತಾರೆ. ವೈಲ್ಡ್ಲೈಫ್ ಫೋಟೋಗ್ರಫಿ ಎಂಬುದು ಹಲವರ ನೆಚ್ಚಿನ ಹವ್ಯಾಸ. ಇಂತಹ ಛಾಯಾಗ್ರಾಹಕರು ಸೆರೆ ಹಿಡಿದ ಇಂತಹ ಅಪರೂಪದ ದೃಶ್ಯಗಳು ಕ್ಷಣಮಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತವೆ. ಮತ್ತೆ ಮತ್ತೆ ನೋಡುವಂತೆಯೂ ಮಾಡುತ್ತವೆ. ಇದು ಕೂಡಾ ಅಂತಹದ್ದೇ ಸುಂದರ ದೃಶ್ಯ.
Viral Video: ಕಬ್ಬಿನ ಲಾರಿಯನ್ನು ಮಾತ್ರ ತಡೆದು ನಿಲ್ಲಿಸುವ ಆನೆ!: ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆ

ಇದೊಂದು ದೃಶ್ಯ ಕಾವ್ಯದಂತೆ ಕಾಣಿಸಿಕೊಳ್ಳುವ ದೃಶ್ಯ. ಚಿರತೆ ಮತ್ತು ಕರಿಚಿರತೆ ಸಾಗುವ ದೃಶ್ಯದ ಮೂಲಕ ಈ ಕಿರು ಕ್ಲಿಪ್ ಶುರುವಾಗುತ್ತದೆ. ಆದರೆ, ಈ ಜೋಡಿ ಒಂದು ಕ್ಷಣ ಕ್ಯಾಮೆರಾದತ್ತನೇ ದಿಟ್ಟಿಸಿ ನೋಡುತ್ತವೆ. ಇದಾದ ಬಳಿಕ ತಮ್ಮ ಪಯಣವನ್ನು ಮುಂದುವರಿಸುತ್ತವೆ. ಶಾಜ್ ಕ್ಯಾಪ್ಶನ್ನಲ್ಲಿ ಉಲ್ಲೇಖಿಸಿರುವಂತೆ ಈ ಚಿರತೆ ಮತ್ತು ಕರಿಚಿರತೆ ಜೋಡಿಯ ಹೆಸರು ಸಯಾ ಮತ್ತು ಕ್ಲಿಯೋ.
