Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Jog Falls Tourist Missing: ಶಿವಮೊಗ್ಗದಲ್ಲಿ ಮಳೆ ಅಭಾವ: ಜೋಗ ಜಲಪಾತದಲ್ಲಿ ಕಮ್ಮಿಯಾದ ಪ್ರವಾಸಿಗರು !

    Author AINBy Author AINJune 25, 2023
    Share
    Facebook Twitter LinkedIn Pinterest Email

    ಶಿವಮೊಗ್ಗ: ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ. ಬಾನೆತ್ತರಿಂದ ಧುಮ್ಮುಕ್ಕುವ ಜೋಗವನ್ನು ನೋಡುವುದೇ ಒಂದು ಅದ್ಬುತ. ಹಚ್ಚ ಹಸಿರಿನ ನಡುವೆ ಹಾಲ್ ನೊರೆಯಂತೆ ದುಮ್ಮುಕ್ಕುವ ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಈ ಬಾರಿ ಮುಂಗಾರು  ಮಳೆ ಕೈಕೊಟ್ಟಿದ್ದರಿಂದ ಜೋಗ ಜಲಪಾತದ ಘತವೈಭವ ಮರೆಯಾಗಿದೆ. ಜೋಗದ ಸಿರಿಯನ್ನು ಸವಿಯಲು ಬರುತ್ತಿರುವ ಪ್ರವಾಸಿಗರು ಬರೀ ಕಲ್ಲುಬಂಡೆಗಳಿಂದಲೇ ತುಂಬಿಕೊಂಡಿರುವ ಜೋಗವನ್ನು ನೋಡಿ ಮರುಗುವ ಸ್ಥಿತಿ ಪ್ರವಾಸಿಗಳಿಗೆ ಬಂದೋದಗಿದ್ದೆ.

    ಮಲೆನಾಡಿನ ಪ್ರಕೃತಿ ವೈಭವಕ್ಕೆ ಮರಳಾಗದ ಮನಸೇ ಇಲ್ಲ. ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ದಟ್ಟ ಕಾನನ, ಕಾನನದ ಮದ್ಯೆ ಹಾಲ್ ನೋರೆಯಂತೆ ದುಮ್ಮುಕ್ಕಿ ಹರಿಯುವ ಜರಿಗಳು, ಮಂಜಿನ ಹನಿಗಳ ಕಣ್ಣಾ ಮುಚ್ಚಾಲೆ ಆಟ. ಇವೆಲ್ಲವೂ ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇದಕ್ಕೆ ಜೋಗ ಜಲಪಾತ ಕೂಡ ಹೊರತಾಗಿಲ್ಲ. ಜೋಗ ಜಲಪಾತಕ್ಕೆ ಜೋಗ ಜಲಪಾತವೇ ಸಾಟಿ ಎಂಬಂತೆ ಹಸಿರು ಐಸಿರಿಯ ನಡುವೆ ನಾಲ್ಕು ಕಾವಲುಗಳಾಗಿ ಬೀಳುವ ಶರಾವತಿಯನ್ನ ಕಣ್ಣು ತುಂಬಿಕೊಳ್ಳೋದೆ ಒಂದು ಅನುಭವ. ರಾಜ ಗಾಂಭಿರ್ಯದ ರಾಜ, ಬಳ್ಳಿಯಂತೆ ಬಳುಕುವ ರಾಣಿ, ರಭಸವಾಗಿ ಧುಮ್ಮುಕ್ಕುವ ರಾಕೇಟ್, ಬಂಡೆ ಕಲ್ಲುಗಳನ್ನು ಲೆಕ್ಕಿಸದೆ ಬೀಳುವ ರೋರರ್ಗಳನ್ನು ನೋಡುವುದೇ ಒಂದು ಅದ್ಬುತ. ಹಚ್ಚ ಹಸಿರಿನ ಬೆಟ್ಟದ ಮೇಲಿಂದ ನಾಲ್ಕು ಕವಲುಗಳಾಗಿ ಹರಿಯುವ ಜೋಗ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಆದರೆ ಅಂತಹ ಅದ್ಬುತ ಇದೀಗ ಮಾಯವಾಗಿದೆ. ಕೈಕೊಟ್ಟ ಮಳೆಯಿಂದಾಗಿ ಜೋಗದ ಸೊಬಗೆ ಮಾಯವಾಗಿ, ಹಾಳು ಬಿದ್ದಂತಾಗಿದ್ದು ಬರೀ ಬಂಡೆ ಕಲ್ಲುಗಳಿಂದಲೇ ತುಂಬಿದ್ದು, ಬರುವ ಪ್ರವಾಸಿಗರು ಜೋಗೆಯ ಸೊಬಗನ್ನು ನೋಡಲು ಸಾಧ್ಯವಾಗದೇ ನಿರಾಸೆಯಿಂದಲೇ ಹಿಂದುರುಗ ಬೇಕಾದ ಸ್ಥಿತಿ ಬಂದೋದಗಿದೆ.

    Demo

    ಪ್ರವಾಸಿಗರು ಶರಾವತಿ ಒಡಲು ನೀರಿಲ್ಲದೇ ಬರೀದಾಗಿರುವುದರಿಂದ ಜೋಗದಲ್ಲಿ ನೀರು ಕೂಡ ದುಮ್ಮುಕ್ಕುತ್ತಿಲ್ಲ. ಕ್ಷೀರಸಾಗರದಂತೆ ಕಂಗೊಳಿಸುತ್ತಿದ್ದ ಜಲಪಾತವಿಂದು ನೀರು ಇಲ್ಲದೇ ಬಣಗುಡುತ್ತಿದೆ. ಇದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. ಇನ್ನು ಈ ಬಾರಿ ಜೂನ್ 20 ಕಳೆದರೂ ಶರಾವತಿ ಜಲಾನಯನ ಪ್ರದೇಶ ಹಾಗೂ ಜೋಗ ಜಲಪಾತ ಪ್ರದೇಶದಲ್ಲಿ ಮಳೆಪ್ರಮಾಣ ಕಡಿಮೆಯಾಗಿದೆ..ಕಳೆದ ವರ್ಷ. ಇಷ್ಟ ಹೊತ್ತಿಗಾಗಲೇ ಜೋಗ ಜಲಪಾತ ನೀರಿನಿಂದ ಕಂಗೊಳಿಸುತ್ತಿತ್ತು, ಆದ್ರೆ ಈ ಬಾರಿ ನೀರು ಇಲ್ಲದಿರುವುದಂದು ಪ್ರವಾಸಿಗರಿಗೆ ನಿರಾಸೆ ತಂದಿದೆ..

    ಜೂನ್ ತಿಂಗಳಿನಲ್ಲಿ ಜೋಗ ಜಲಪಾತ ನೀರಿಲ್ಲದೇ ಬಣ ಗುಡುತ್ತಿದ್ದು, ಅದರ ಗತವೈಭವ ಇದೀಗ ಮರೆಯಾಗಿದೆ. ಹಾಲ್ ನೊರೆಯಂತೆ ನೀರು ದುಮ್ಮುಕ್ಕುವ ಜಾಗದಲ್ಲಿ ಇದೀಗ ಕಲ್ಲುಬಂಡೆಗಳೇ ಕಾಣುತ್ತಿದ್ದು ಪ್ರವಾಸಿಗರು ನೀರಾಸೆಯಿಂದ ವಾಪಸ್ಸಾಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ವರುಣದೇವ ಕೃಪೆ ತೋರಿ ಸರಿಯಾದ ಮಳೆ ಸುರಿಸುವ ಮೂಲಕ ಜೋಗದ ಗತ ವೈಭವ ಮತ್ತೆ ಮರುಕಳಿಸುವಂತೆ ಮಾಡಲಿ ಎಂಬುದು ಆಶಯ..

    Demo
    Share. Facebook Twitter LinkedIn Email WhatsApp

    Related Posts

    ಧಾರವಾಡದಲ್ಲಿ ಡಿಜೆ ಅಬ್ಬರ ಬಲು ಜೋರು: ಸಖತ್ ಹೆಜ್ಜೆ ಹಾಕಿದ ಹುಡುಗರು

    September 20, 2023

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – 63 ವರ್ಷದ ವೃದ್ಧ ಅರೆಸ್ಟ್

    September 20, 2023

    ತಮಿಳುನಾಡಿನವರ ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದು ಇಲ್ಲ – ಸಚಿವ ಚಲುವರಾಯಸ್ವಾಮಿ

    September 20, 2023

    Jagdish Shetter: ಕೇಂದ್ರದಲ್ಲಿದ್ದ ಸರ್ಕಾರ ರಾಜ್ಯದಲ್ಲಿಯು ಬರುತ್ತೆ ಅನ್ನೋದು ಭ್ರಮೆ ಆಗಿದೆ: ಜಗದೀಶ್ ಶೆಟ್ಟರ್

    September 20, 2023

    Renukacharya: ನಿಮ್ಮ ದುರಹಂಕಾರದ ಮಾತುಗಳಿಂದಲೇ ಹಲವರು ಬಿಜೆಪಿ ಬಿಡುತ್ತಿದ್ದಾರೆ: ರೇಣುಕಾಚಾರ್ಯ

    September 20, 2023

    Satish Jarakiholi: 3 ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ: ಸತೀಶ್ ಜಾರಕಿಹೊಳಿ

    September 20, 2023

    ನೀರಿನ ವಿಚಾರಕ್ಕೆ “ಜಡೆ” ಜಗಳ -ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ

    September 20, 2023

    Shivraj Thandagi: 80 ಕೋಟಿ ಸಚಿವರಿಗೆ ಹಾಗೂ 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು: ಶಿವರಾಜ ತಂಗಡಗಿ

    September 20, 2023

    ಕಾರ್ಖಾನೆಯಲ್ಲಿ ಕಾಪರ್ ವೈರ್ ಹಾಗೂ ವಾಹನಗಳ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

    September 20, 2023

    Arvinda Bellad:‌ ಜಗದೀಶ್ ಶೆಟ್ಟರ್ ಮನಸ್ಸು ಇನ್ನೂ ಬಿಜೆಪಿಯಲ್ಲಿದೆ ಅನಿಸುತ್ತೆ: ಅರವಿಂದ ಬೆಲ್ಲದ್

    September 20, 2023

    Nelamangala Breaking; ಈಜಲು ಕ್ವಾರಿಗೆ ಹೋಗಿದ್ದ ಯುವಕ ಶವವಾಗಿ ಪತ್ತೆ

    September 20, 2023

    Gadaga Breaking; ಜಿಲ್ಲೆಯ 6 ತಾಲೂಕು ಬರಗಾಲ ಘೋಷಣೆ, ಪರಿಸ್ಥಿತಿ ಎದುರಿಸಲು ಸಿದ್ಧ – ಎಚ್‌.ಕೆ. ಪಾಟೀಲ್

    September 20, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.