ವಿಜಯಪುರ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ದಲಿತರಿಗೆ ಅನ್ಯಾಯ ಮಾಡಿ ಅಹಿಂದ ನಾಯಕ ಅಂತೀರಿ. ನಿಮಗೆ ನಾಚಿಕೆ ಆಗೋದಿಲ್ವಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತಿಗೆ ನಾನು ಎಂದಿಗೂ ಬದ್ಧನಾಗಿದ್ದೇನೆ: DCM ಡಿಕೆಶಿ!
ಖರ್ಗೆ ಅವರೇ ನೀವಾದರೂ ಬುದ್ದಿ ಹೇಳಬೇಕಿತ್ತು. ಖರ್ಗೆ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ಖರ್ಗೆಗೆ ಅನ್ಯಾಯ ಮಾಡಿದರೆ ಯಾಕೆ ಸುಮ್ಮನೆ ಕುಳಿತಿದ್ದೀರಿ ಎಂದು ದಲಿತ ಸಮುದಾಯಕ್ಕೆ ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ್ಯಾಯ ಸಿಗಬೇಕು. ಖರ್ಗೆ ಅವರಿಗೆ ಕಾಂಗ್ರೆಸ್ ಗೌರವ ನೀಡಬೇಕು. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ಕರ್ನಾಟಕದ್ಯಾಂತ ಆಂದೋಲನ ಮಾಡುತ್ತೇವೆ ಎಂದ ಎಚ್ಚರಿಕೆ ನೀಡಿದರು.