ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಅಂಗಡಿ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 77 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ರಮೇಶ ಮುಂಭಾಗದಲ್ಲಿರುವ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನವಾಗಿತ್ತು.
ಕಳ್ಳತನವಾಗಿರುವ ಚಿನ್ನಾಭರಣಗಳಲ್ಲಿ 780 ಗ್ರಾಂ ಚಿನ್ನ, 23.3 ಕೆಜಿ ಮೌಲ್ಯದ ಬೆಳ್ಳಿ ಆಭರಣ, ಕಳ್ಳತನ ಕೃತ್ಯಕ್ಕೆ ಬಳಸಿದ ಕಟರ್, ಗ್ಯಾಸ್ ಕಟ್ಟರ್ ಹಾಗೂ 10 ಸಾವಿರ ನಗದು ಹಣ ಸೇರಿದಂತೆ 77 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫರಾನ್ ಶೇಖ್, ಮುಖೇಶ್, ಫಾತೀಮಾ ಶೇಖ್, ಅಫ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಇನ್ನೊಂದೆರಡು ಆರೋಪಿಗಳ ಬಂಧನ ಹಾಗೂ ಚಿನ್ನಾಭರಣ ಜಪ್ತಿ ಮಾಡಬೇಕಾಗಿದೆ. ಪ್ರಕರಣದ ಪತ್ತೆಗೆ ವಿವಿಧ ಇನ್ಸಪೆಕ್ಟರ್, ಪಿಎಸ್ಐ, ಸಿಬ್ಬಂದಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಸತತ ಒಂದೂವರೆ ತಿಂಗಳ ಪರಿಶ್ರಮದಿಂದಾಗಿ ದೊಡ್ಡ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಮಾಹಿತಿ ನೀಡಿದರು.