ಬಸವನಬಾಗೇವಾಡಿ: ಬೆಳಗಾವಿ ಚಳಿಗಾಲದ ಅಧಿವೇಶನದೊಳಗೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಇರದೇ ಇದ್ದರೆ ವಿಕಾಸಸೌಧದವರೆಗೆ ಹೋರಾಟ ನಡೆಸಲಾಗುತ್ತದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಎಚ್ಚರಿಸಿದ್ದಾರೆ. 2 ಎ ಹಕ್ಕೊತ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದಿನ ಸರಕಾರ ನಮ್ಮ ಪಾದಯಾತ್ರೆ ಹೋರಾಟಕ್ಕೆ 2 ಡಿ ಸೌಲಭ್ಯ ನೀಡಿತು. ಅಷ್ಟರಲ್ಲಿ ನೀತಿ ಸಂಹಿತೆ ಬಂತು. ಆ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ. ಕೆಲವರಂತೂ ಬಿಜೆಪಿ ಸರಕಾರವಿದ್ದಾಗ ಮಾತ್ರ ನಿಮ್ಮ ಪಾದಯಾತ್ರೆ ಹೋರಾಟಾನಾ ಕಾಂಗ್ರೆಸ್ ಸರಕಾರವಿದ್ದರೆ ಇಲ್ಲವಾ ಎಂದೇ ಪ್ರಶ್ನಿಸಿದ್ದಾರೆ.
https://ainlivenews.com/b-y-vijayendra-met-former-prime-minister-hd-deve-gowda/
ಹಾಲಿ ಸರಕಾರಕ್ಕೂ ನಾವು ಒತ್ತಾಯ ಮಾಡಿದ್ದೇವೆ. ರಸ್ತೆಯಲ್ಲಿಇಷ್ಟಲಿಂಗ ಪೂಜೆ ನೆರವೇರಿಸಿ 2 ಎ ಬೇಡಿಕೆಗೆ ಒತ್ತಾಯಿಸುವುದು ಮುಂದುವರಿದಿದೆ. ಕಿತ್ತೂರು ಚನ್ನಮ್ಮ ಜಯಂತಿ ಆಚರಿಸಿ ಎಂಬ ಬೇಡಿಕೆ ಇಟ್ಟಾಗ ಅಂದಿನ ಸಚಿವೆ ಉಮಾಶ್ರೀ ಅವರು ಇಲ್ಲಿವರೆಗೆ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಆಚರಣೆ ಮಾಡಿಲ್ಲ ಎಂದು ಹೇಳಿದ್ದರು.
ನಂತರ ಜಯಂತಿ ಆಚರಣೆಗೆ ಸರಕಾರ ಆದೇಶ ಮಾಡಿತು. ಎಲ್ಲ ಲಿಂಗಾಯತ ಒಳಪಂಗಡಗಳ ಒಳಿತಿಗೆ ಕೆಂದ್ರದ ಒಬಿಸಿ ಪಟ್ಟಿಗೂ ಸೇರಿಸಲಿ. ಈಗಂತೂ ನಾವು ನಮ್ಮ 2 ಎ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ ಎಂದರು.