ಬೆಂಗಳೂರು: ರಾಜ್ಯದಲ್ಲಿ ಹಾಗೆ ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಬಿಸಿಲು ಕಾವೇರುತ್ತಿದ್ದು ಈ ವೇಳೆ ಜಲಕಂಟಕ ಎದುರಾಗಿರೋ ಹೊತ್ತಲ್ಲೇ ಕೆರೆಗಳಿಗೂ ಕಂಟಕ ಒದಗಿ ಬರ್ತಿದೆ.
ಕಾಂಕ್ರೀಟ್ ಸಿಟಿಯಾಗ್ತಿರೋ ಬೆಂಗಳೂರಲ್ಲಿ ಅಳಿದುಳಿದ ಕೆರೆಗಳಿಗೂ ಕಂಟಕ ಬರ್ತಿದ್ದು ವಿವಿಧೆಡೆಯಿಂದ ಪಕ್ಷಿಗಳನ್ನ ತನ್ನತ್ತ ಆಕರ್ಷಿಸುತ್ತಿದ್ದ ಸರ್ಜಾಪುರ ರಸ್ತೆಯಲ್ಲಿರೋ ಸಾವಳಕೆರೆಗೂ ಅಭಿವೃದ್ಧಿಯ ಶಾಪ ತಟ್ಟಿದೆ.
Udyoga Mela: ಬೆಂಗಳೂರಲ್ಲಿ ಫೆಬ್ರವರಿ 26 , 27ರಂದು ಬೃಹತ್ ಉದ್ಯೋಗ ಮೇಳ!
ಸ್ವಚ್ಚಪರಿಸರದ ಗೂಡಾಗಿದ್ದ ಕೆರೆಗೆ ಒಂದೆಡೆ ತ್ಯಾಜ್ಯ ನೀರು ಸೇರುತ್ತಿದ್ರೆ,ಮತ್ತೊಂದೆಡೆ ಅಭಿವೃದ್ಧಿ ಚಟುವಟಿಕೆಗಳು ವಾತಾವರಣವನ್ನ ಹದಗೆಡಿಸುತ್ತಿದೆ ಸಾವಳ ಕೆರೆಗೆ ಕಂಟಕವಾದ ಎಂ.ಸ್ಯಾಂಡ್, ಕಾಮಗಾರಿ ಪಕ್ಷಿಗಳ ಕಲರವಕ್ಕೆ ಕಂಟಕ ತಂದ ಅಭಿವೃದ್ಧಿ ಚಟುವಟಿಕೆ
ರಾಜಧಾನಿ ಬೆಂಗಳೂರಿನ ಜೀವಸೆಲೆಯ ಮೂಲವಾಗಿದ್ದ ಕೆರೆಗಳು ಅಭಿವೃದ್ಧಿ ಹೆಸರಲ್ಲಿ ಕಣ್ಮರೆಯಾಗ್ತಿವೆ.ಸಾವಳ ಕೆರೆಯ ಜೀವಸಂಕುಲಕ್ಕೆ ಆಪತ್ತು ಎದುರಾಗುವ ಆತಂಕ ಸೃಷ್ಟಿಯಾಗಿದೆ. 61.37 ಎಕರೆ ಇರೋ ಈ ಕೆರೆಯಲ್ಲಿ ಪ್ರತಿವರ್ಷ ಸಾವಿರಾರು ಪಕ್ಷಿಗಳು ದೇಶ-ವಿದೇಶಗಳಿಂದ ಬಂದು ಸಂತಾನೋತ್ಪತಿ ಮಾಡುತ್ತಿದ್ದವು,
ಇದೀಗ ಸದ್ದಿಲ್ಲದೇ ಕೆರೆಗೆ ಚರಂಡಿ ನೀರು ಮಿಕ್ಸ್ ಆಗ್ತಿದ್ದು, ಪಕ್ಷಿಗಳ ಸಂಖ್ಯೆ ಕೂಡ ಇಳಿಮುಖವಾಗ್ತಿದೆ ಕೆರೆ ಸುತ್ತಮುತ್ತ ಎತ್ತ ನೋಡಿದ್ರೂ ಅಪಾರ್ಟ್ ಮೆಂಟ್ ಗಳೇ ತಲೆಎತ್ತಿವೆ. ಇತ್ತ ಸುತ್ತಮುತ್ತ ಕಾಮಗಾರಿಗಳು ಕೂಡ ನಡಿತಿದ್ದು, ಕೆರೆಯ ಕೂಗಳತೆ ದೂರದಲ್ಲೇ ಎಂ.ಸ್ಯಾಂಡ್ ಸಂಗ್ರಹ ಮಾಡಲಾಗಿದೆ.ಇದರಿಂದ ಕೆರೆ ಪರಿಸರಕ್ಕೆ ಸಮಸ್ಯೆಯಾಗ್ತಿದೆ,
ಕೆರೆಗೆ ಅಪಾರ್ಟ್ ಮೆಂಟ್ ಗಳ ಕಲುಷಿತ ನೀರು ಕೂಡ ಹರಿದುಬರ್ತಿದ್ದು, ಇದರಿಂದ ಕೆರೆ ಏರಿ ಮೇಲೆ ವಾಸನೆ ಬರ್ತಿದೆ ಕೆರೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರೋ ಪಾಲಿಕೆ ವಿರುದ್ಧ ಪರಿಸರಪ್ರೇಮಿಗಳು ಕೂಡ ಆಕ್ರೋಶ ಹೊರಹಾಕ್ತಿದ್ದಾರೆ