ಬೆಂಗಳೂರು: ನಾಯಕತ್ವದ ಕಿತ್ತಾಟದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಪಾದಯಾತ್ರೆ ಸ್ಥಗಿತದಿಂದ ಭಾರೀ ನಿರಾಸೆಯಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಹಾರ್ ಜೈಲಿನ ಲ್ಲಿದ್ದು ಬಂದದ್ದ ಶಿವಕುಮಾರ್ ಅವರಿಗೆ ನ್ಯಾಯಾಂಗದ ಶಕ್ತಿ ಏನೆಂದು ಗೊತ್ತಿದೆ. ಹೀಗಾಗಿ ಪಾದಯಾತ್ರೆ ರದ್ದುಗೊಳಿಸಿದ್ದಾರೆ. ಪಾದಯಾ ತ್ರೆ ಮೂಲಕ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರು. ಆದರೆ, ಕರ್ನಾಟಕ ಹೈಕೋ ರ್ಟ್‌ನ ನಿರ್ದೇಶನಗಳ ಬಳಿಕ ಅಂತಿಮವಾಗಿ ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಇಬ್ಬರ ಕನಸುಗಳು ಭಗ್ನ ಗೊಂಡಿವೆ. ಜನರ ಮೇಲಿನ ಕಾಳಜಿಯಿಂದಲ್ಲ, ನ್ಯಾಯಾಲಯ ಕ್ರಮ ಕೈಗೊಳ್ಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಪಾದಯಾತ್ರೆ ರದ್ದುಗೊಳಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
