ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಏರೋ ಶೋ 2025 ನಡೆಯಲಿರುವ ಹಿನ್ನೆಲೆ, ಜ. 23 ರಿಂದ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದ್ದು, ಕ್ರೇನ್ ಸ್ಥಗಿತಕ್ಕೆ ಸೂಚನೆ ಕೊಡಲಾಗಿದೆ.
ಸಿದ್ದರಾಮಯ್ಯ ರಾಜೀನಾಮೆ ಕೊಡೋ ಮುಂಚಿತವಾಗಿ ಮುಡಾ ಪ್ರಕರಣ ಸಿಬಿಐಗೆ ಹಸ್ತಾಂತರಿಸಲಿ: ವಿಜಯೇಂದ್ರ!
ಯಲಹಂಕ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಫೆ.2 ರಿಂದ 14ರವರೆಗೆ ಅಂತರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ-2025’ ನಡೆಯಲಿದೆ. ಈ ನಿಟ್ಟಿನಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೂ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧಿಸಿದ್ದು, ಕ್ರೇನ್ಗಳನ್ನು ಬಳಸದಂತೆ ಸೂಚಿಸಲಾಗಿದೆ.
ಯಲಹಂಕದ 13 ಕಿ.ಮಿ ಸುತ್ತಮುತ್ತ ಮಾಂಸ ಮಾರಾಟ ಹಾಗೂ ಉದ್ದಿಮೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಮಯ ಉಲ್ಲಂಘನೆ ಮಾಡಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮಕ್ಕೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಏಷ್ಯಾದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2025, ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ದ್ವೈವಾರ್ಷಿಕ ಕಾರ್ಯಕ್ರಮವು ಅತ್ಯಾಧುನಿಕ ಏರೋಸ್ಪೇಸ್ ತಂತ್ರಜ್ಞಾನಗಳ ಜೊತೆಗೆ ವೈವಿಧ್ಯಮಯ ಮಿಲಿಟರಿ ಮತ್ತು ನಾಗರಿಕ ವಿಮಾನಗಳ ಪ್ರದರ್ಶನವಾಗಿದೆ.
ಪ್ರದರ್ಶನವು ಉದ್ಯಮದ ವೃತ್ತಿಪರರು, ವಾಯುಯಾನ ಉತ್ಸಾಹಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದು ನೆಟ್ವರ್ಕಿಂಗ್, ಸಹಯೋಗ ಮತ್ತು ಏರೋಸ್ಪೇಸ್ ವಲಯದ ಇತ್ತೀಚಿನ ಪ್ರಗತಿಗಳನ್ನು ಅನ್ವೇಷಿಸಲು ಒಂದು ಉತ್ತಮ ವೇದಿಕೆ ಆಗಿದೆ.