ಬೆಂಗಳೂರು: ಇಲ್ಲಿನ ಉತ್ತರ ಲೋಕಸಭಾ ಕ್ಷೇತ್ರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಂದರೆ ಸ್ವಾಗತ ಮಾಡ್ತೀನಿ. ಸುಮಲತಾ ಸೇರಿದಂತೆ ಯಾರೇ ಬೆಂಗಳೂರು ಉತ್ತರದ ಅಭ್ಯರ್ಥಿಯಾದರೂ ಅವರ ಪರ ಸಂತೋಷವಾಗಿ ಕೆಲಸ ಮಾಡ್ತೀನಿ ಅಂತ ಮಾಜಿ ಸಿಎಂ, ಸಂಸದ ಸದಾನಂದಗೌಡ (DV Sadananda Gowda) ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ರಾಜಕೀಯ ನಿವೃತ್ತಿ ಕುರಿತು ಮಾತಾನಾಡಿದ ಅವರು, ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ನನ್ನ ಸ್ವಂತ ನಿರ್ಧಾರ ಯಾರು ನನ್ನ ಮೇಲೆ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಚುನಾವಣೆ (Elections) ರಾಜಕೀಯ ನಿವೃತ್ತಿ ನಿರ್ಧಾರ ದಿಢೀರ್ ನಿರ್ಧಾರ ಅಲ್ಲ. ಕಳೆದ ಚುನಾವಣೆಯಲ್ಲಿಯೇ ನಿವೃತ್ತಿ ಘೋಷಣೆ ಮಾಡಿದ್ದೆ. ಅದರಂತೆ ಪಕ್ಷಕ್ಕಾಗಿ ನಿವೃತ್ತಿ ಘೋಷಣೆ ಮಾಡಿದ್ದೇನೆ. ಯುವಕರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇನ್ಮುಂದೆ ಪಕ್ಷದ ಕೆಲಸ ಮಾಡಿಕೊಂಡು ಇರುತ್ತೇನೆ ಎಂದರು.