ಹುಬ್ಬಳ್ಳಿ: ರಾಜ್ಯದಲ್ಲಿ ಪರಿಸ್ಥಿತಿ ಏನಾಗಿದೆ ತಿಳಿತಾ ಇಲ್ಲರಾಜ್ಯದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಅನ್ನೋದೇ ತಿಳಿಯದಂತಾಗಿದೆ ಎಂದು ಕೇಂದ್ರಸಚಿವ ಎ.ನಾರಾಯಣಸ್ವಾಮಿ ಸಂಶಯ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಸರ್ಕಾರಿ ಅಧಿಕಾರಿಗಳು ಯಾರ ಆದೇಶದ ಮೇಲೆ ಕೆಲಸ ಮಾಡಬೇಕು ಅನ್ನೋ ಗೊಂದಲದಲ್ಲಿದ್ದಾರೆ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ ಅನ್ನೋ ಅನುಮಾನ ಇದೆ ಎಂದ ಅವರು, ಸರ್ಕಾರದಲ್ಲಿ ಯಾರ ಕೈ ಮುಂದೆ ನಡೆಯುತ್ತಿದೆ ಅನ್ನೋದೇ ಗೊಂದಲ ಇದೆ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರ ಪುತ್ರ ಯತೀಂದ್ರ ಅವರು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ
ಯತೀಂದ್ರ ಅವರು ಕಾಂಗ್ರೆಸ್ ಸರ್ಕಾರದ ಆಡಳಿತದ ಮತ್ತೊಂದು ಕೇಂದ್ರ ಬಿಂದು ಆಗಿದ್ದು ಸಿದ್ಧರಾಮಯ್ಯ ಅವರೇ ತಮ್ಮ ಆಡಳಿತ ನೋಡಿಕೊಳ್ಳುವಂತೆ ಯತೀಂದ್ರ ಅವರಿಗೆ ಹೇಳಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಕಾರ್ಯವೈಖರಿಯನ್ನ ಬದಲಾವಣೆ ಮಾಡಿಕೊಳ್ಳಬೇಕು’ ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ತೆರಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪುರಸಭೆ, ನಗರಸಭೆಗೆ ನೀಡಿದ ಅನುದಾನ ವಾಪಸ್ ಪಡೆದುಕೊಂಡಿದ್ದಾರೆರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ದಿವಾಳಿಯಾಗಿದ್ದು ಶಕ್ತಿ ಯೋಜನೆ ಬಿಟ್ಟು ಯಾವುದೇ ಯೋಜನೆ ಸಮರ್ಪಕವಾಗಿ ನಡೆಯುತ್ತಿಲ್ಲ ರಾಜ್ಯದಲ್ಲಿ ಗುಂಪುಗಾರಿಕೆ ಆಡಳಿತ ನಡೆಯುತ್ತಿದೆ ಎಂದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ವಿಚಾರವಾಗಿ ಅಸಮಾಧಾನ ವಿಚಾರ, ವಿಜಯೇಂದ್ರ ವಿಚಾರವಾಗಿ ಯಾವುದೇ ಅಸಮಾಧಾನಗಳಿಲ್ಲ ಎಂದು ಸಮರ್ಥನೆ ಮಾಡಿಕೊಂಡ ಅವರುಪಕ್ಷದ ವರಿಷ್ಠರೇ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನನೀಡಿದ್ದಾರೆ
ಅನೇಕ ಯುವ ಕಾರ್ಯಕರ್ತರು ವಿಜಯೇಂದ್ರ ಅವರನ್ನ ಸ್ವಾಗತ ಮಾಡಿದ್ದಾರೆ ಅವರ ಅಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಲೋಕಸಭೆ ಚುನಾವಣೆಗೆ ನಮ್ಮ ಅಭಿವೃದ್ದಿ ವಿಚಾರಗಳೇ ನಮಗೆ ಶ್ರೀರಕ್ಷೆ ಆಗಿದ್ದುಕಳೆದ 9 ವರ್ಷಗಳಿಂದ ಪ್ರಧಾನಿ ಮೋದಿ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಾಳೆ ಕೇಂದ್ರದಿಂದ ವೀಕ್ಷಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದರು.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಇದೇ ಸಮಯದಲ್ಲಿ ಹೇಳಿದರು