ಮಹಿಳೆಯರು ಸೌಂದರ್ಯದ ಗಣಿ ಎನ್ನಬಹುದು. ಅವರು ಧರಿಸುವ ಆಭರಣ ಅವರ ಅಂದವನ್ನ ದುಪ್ಪಟ್ಟು ಮಾಡುತ್ತದೆ. ಮುಖ್ಯವಾಗಿ ಆಭರಣ ಎಂದರೆ ಬೆಳ್ಳಿ, ಬಂಗಾರ ಹಾಗೂ ವಜ್ರ ಸಾಮಾನ್ಯವಾಗಿ ನೆನಪಾಗುತ್ತದೆ.
ಈ ಆಭರಣಗಳನ್ನ ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಜ್ಯೋತಿಷ್ಯದ ಪ್ರಕಾರ ಸಹ ಅನೇಕ ಲಾಭಗಳಿದೆ. ನಮ್ಮ ಜೀವನದಲ್ಲಿ ನಾವು ಧರಿಸುವ ಆಭರಣ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ ಎನ್ನಲಾಗುತ್ತದೆ. ಅದರಲ್ಲಿ ಬೆಳ್ಳಿಯು ಒಂದು.
ಬೆಳ್ಳಿ ಎಂದರೆ ಚಂದ್ರನಿಗೆ ಸಂಬಂಧಿಸಿದ್ದು. ಅಂದರೆ ಇದರ ಸ್ವಭಾವ ಚಂದ್ರನಂತೆ ತಂಪು. ಈ ಲೋಹವು ಹೆಚ್ಚು ಕೋಪಗೊಳ್ಳುವ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಬೆಳ್ಳಿಯನ್ನು ಚಂದ್ರ ಮತ್ತು ಶುಕ್ರರು ಆಳುತ್ತಾರೆ. ಆದ್ದರಿಂದ ಇದನ್ನು ಧರಿಸುವುದರರಿಂದ ಜಾತಕದಲ್ಲಿ ಶುಕ್ರ ಮತ್ತು ಚಂದ್ರ ಇಬ್ಬರನ್ನೂ ಬಲಪಡಿಸುತ್ತದೆ.
ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿ ಆಭರಣಗಳನ್ನು ಧರಿಸುವುದು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದು ಹೇಳಲಾಗಿದೆ. ಅದರಲ್ಲೂ ಮೂರು ರಾಶಿಗಳಿಗೆ ಬೆಳ್ಳಿ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ.
ಮೇಷ: ಈ ರಾಶಿಯ ಆಡಳಿತ ಗ್ರಹ ಮಂಗಳ. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಇವರಿಗೆ ಹಾನಿಯುಂಟಾಗುತ್ತದೆ. ಈ ರಾಶಿಯ ಜನರು ಬೆಳ್ಳಿಯನ್ನು ಬಳಸಿದರೆ, ಅವರ ಆರ್ಥಿಕ ಸ್ಥಿತಿಯು ಸಾಕಷ್ಟು ದುರ್ಬಲವಾಗಬಹುದು. ಹಣಕಾಸಿನ ನಷ್ಟದ ಸಾಧ್ಯತೆಗಳಿವೆ.
ಸಿಂಹ: ಈ ರಾಶಿಯ ಆಡಳಿತ ಗ್ರಹ ಸೂರ್ಯ. ಸೂರ್ಯನನ್ನು ಅತ್ಯಂತ ಬಿಸಿ ಗ್ರಹವೆಂದು ಪರಿಗಣಿಸಿದರೆ, ಚಂದ್ರನು ಶೀತ ಮತ್ತು ತಂಪಾಗಿಸುವ ಗ್ರಹವಾಗಿದೆ. ಈ ರಾಶಿಯ ಜನರಿಗೆ ಬೆಳ್ಳಿಯನ್ನು ಧರಿಸುವುದು ತುಂಬಾ ಹಾನಿಕಾರಕ. ಆದರೆ ಈ ಜನರಿಗೆ ಚಿನ್ನ ಪ್ರಯೋಜನಕಾರಿ ಲೋಹವೆಂದು ಪರಿಗಣಿಸಲಾಗಿದೆ. ಬೆಳ್ಳಿ ಧರಿಸುವುದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ಮಾಡಿದ ಕೆಲಸಗಳು ಹಾಳಾಗುವ ಸಾಧ್ಯತೆ ಹೆಚ್ಚಬಹುದು.
ಧನು ರಾಶಿ: ಈ ರಾಶಿಯವರಿಗೂ ಬೆಳ್ಳಿ ಉತ್ತಮ ಲೋಹವೆಂದು ಪರಿಗಣಿಸಲಾಗುವುದಿಲ್ಲ. ಈ ರಾಶಿಯ ಜನರು ಬೆಳ್ಳಿಯ ಉಂಗುರ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಆಭರಣಗಳನ್ನು ಧರಿಸಿದರೆ, ಅವರಿಗೆ ಅಪಘಾತಗಳು ಸಂಭವಿಸಬಹುದು ಎಂದು ಹೇಳಲಾಗುತ್ತದೆ.