ದಾವಣಗೆರೆ: ಹೊನ್ನಾಳಿ (Honnalli) ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ(MP Renukacharya) ಸಹೋದರನ ಪುತ್ರನ ಸಾವು ಪ್ರಕರಣ ಕೊನೆಗೂ ಫೈನಲ್ ಟಚ್ ಪಡೆದುಕೊಂಡಿದೆ. ಸುದೀರ್ಘ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಫೈನಲ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಒಂದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಘಟನೆ ಕೊನೆಗೂ ಅಂತ್ಯಕಂಡಿದೆ.
ದಾವಣಗೆರೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳ ತಂಡ ವರದಿ ಸಲ್ಲಿಕೆ ಮಾಡಿದ್ದು, ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಅಪಘಾತದಿಂದ ಸಂಭವಿಸಿರೋ ಸಾವು ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಿದೆ. ಕಳೆದ ನವೆಂಬರ್ ತಿಂಗಳಲ್ಲಿ ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದ್ದರು.
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ಅದಾದ ಕೆಲ ದಿನಗಳಲ್ಲೇ ಚಂದ್ರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು. ಆಗ ರೇಣುಕಾಚಾರ್ಯ ಇದೊಂದು ಕೊಲೆ, ಉದ್ದೇಶ ಪೂರಕ ಘಟನೆಯಂತ ಹೆಚ್ಚಿನ ತನಿಖೆಗೆ ಕೇಳಿ ಪ್ರಕರಣ ಸಿಐಡಿಗೆ ನೀಡಲಾಗಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಐಡಿ ಪ್ರಕರಣದ ಅಂತಿಮ ಹಂತದ ವರದಿಯನ್ನು ಸಲ್ಲಿಕೆ ಮಾಡಿದೆ. ಎಫ್ಎಸ್ಎಲ್ ಮತ್ತು ತಾಂತ್ರಿಕ ಸಾಕ್ಷ್ಯಗಳು ಇದೊಂದು ಅಪಘಾತ ಎಂದು ವರದಿ ನೀಡಿದ್ದು, ಪ್ರಕರಣ ಸ್ಪಷ್ಟ ಕಾರಣದೊಂದಿಗೆ ಮುಕ್ತಾಯಗೊಳಿಸಿದೆ.