ಹುಬ್ಬಳ್ಳಿ: ದೇವರ ಸೇವೆ ಮಾಡಬೇಕು ಅಂದುಕೊಂಡಿದ್ದನ್ನು ಮಾನವ ಹಾಗೂ ಸಮಾಜಕ್ಕೆ ಸೇವೆ ಮಾಡಿದರೆ ಅದುವೇ ದೇವರಿಗೆ ಸಲ್ಲಿಸಿದ ಸೇವೆ. ಈ ತತ್ವದಡಿ ನಿರಂತರವಾಗಿ ಮಾನವ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಸ್ವರ್ಣ ಗ್ರೂಪ್ ಆ್ ಕಂಪನಿ ಚೇರಮನ್ ಡಾ. ಸಿಎಚ್.ವಿಎಸ್ವಿ. ಪ್ರಸಾದ ಹೇಳಿದರು.
ನಗರದ ಭಟ್ಸ್ ಮಿಡಿಯಾ ಕಚೇರಿಯಲ್ಲಿ ಹಮ್ಮಿಕೊಂಡ ಅವರ ಹುಟ್ಟ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜಕ್ಕೆ ಕೊಟ್ಟಿದ್ದನ್ನು ಯಾವಾಗಲೂ ದಾನ ಎಂದು ಭಾವಿಸಿಲ್ಲ. ಅದೊಂದು ಸೇವೆ ಎಂದು ಭಾವಿಸಿದ್ದು, ಈ ಭಾಗ್ಯ ಮತ್ತು ಆಶೀರ್ವಾದ ಕಲ್ಪಿಸಿದ್ದು ದೇವರು. ಇಂತಹ ಅವಕಾಶಗಳು ಇದ್ದವರೆಲ್ಲರಿಗೂ ಬರುವುದಿಲ್ಲ. ಈ ಅವಕಾಶವನ್ನು ನನಗೆ ಒದಗಿಸಿರುವ ಭಗವಂತನಿಗೆ ನಾನು ಸದಾ ಚಿರಋಣಿ ಎಂದರು.
ಸಾಮಾಜಿಕ ಕೆಲಸ ಕಾರ್ಯಗಳಿಗೆ ಕೈಬಿಚ್ಚಿ ಕೊಟ್ಟಷ್ಟು ದೇವರು ದುಪ್ಪಟ್ಟು ಕರುಣಿಸುತ್ತಿದ್ದಾನೆ. ಗಳಿಸಿದ್ದನ್ನು ಎಲ್ಲವನ್ನು ಮಕ್ಕಳಿಗೆ ಹಾಗೂ ನನಗೆ ಬಚ್ಚಿಡುವ ಅನಿವಾರ್ಯತೆ ಇಲ್ಲದಂತಹ ವಾತಾವರಣ ಮನೆಯಲ್ಲಿಯೂ ನಿರ್ಮಾಣಗೊಂಡಿದೆ. ಹೀಗಾಗಿ ಮಿಗಿಲಾಗಿದ್ದನ್ನು ಸೇವೆಗಾಗಿಯೇ ಮೀಸಲಿಡಬೇಕೆಂಬ ನಿರ್ಣಯ ಮಾಡಿಕೊಂಡಿದ್ದೇನೆ ಎಂದರು. ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಿ.ಜಿ. ಶೆಟ್ಟಿ ಮಾತನಾಡಿ, ಡಾ. ಪ್ರಸಾದ ಅವರು ನಿರಂತರವಾಗಿ ಸಾಮಾಜಿಕ ಸೇವೆ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.