ಹುಬ್ಬಳ್ಳಿ: ಛತ್ತೀಸಘಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಕಾರ್ಯಕರ್ತರಿಗೆ ಹರ್ಷದಾಯಕ ಸಂದೇಶ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹರ್ಷ ವ್ಯಕ್ತಪಡಿಸಿದ್ದಾರೆ
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ರವಿವಾರ ಜರುಗಿದ ಮತ ಎಣಿಕೆಯಲ್ಲಿ ಉತ್ತರ ಭಾರತದರಾಜಸ್ಥಾನ, ಮಧ್ಯಪ್ರದೇಶ,ಛತ್ತೀಸಘಡ್ ರಾಜ್ಯಗಳಲ್ಲಿ ಬಿಜೆಪಿಗೆ ನಿಚ್ಚಳ ಲಭಿಸಿದ್ದು ಪಕ್ಷದ ಸಾಮಥ್ರ್ಯವನ್ನು ಸಾಬೀತುಪಡಿಸಿದಂತಾಗಿದೆ. ಇದೇ ವೇಳೆ ನೆರೆಯ ತೆಲಂಗಾಣದಲ್ಲಿ ಕಳೆದ ಬಾರಿಗಿಂತ ಬಿಜೆಪಿ ಅಧಿಕ ಸ್ಥಾನಗಳನ್ನು ಗಳಿಸಿದೆ. ಈ ಫಲಿತಾಂಶಗಳು
ಬಿಜೆಪಿ ವರ್ಚಸ್ಸನ್ನು ಮತ್ತಷ್ಟು ವೃದ್ಧಿಸಿದೆ. ಪಕ್ಷದ ಇಂತಹ ಸಾಧನೆಯು ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದಂತಾಗಿದೆ.
ರಾಜಸ್ಥಾನ ಚುನಾವಣೆಯ ನೇತೃತ್ವವಹಿಸಿದ್ದ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ರವರು ಹಾಗೂ ಇತರ ರಾಜ್ಯಗಳಲ್ಲಿನ ಮುಂದಾಳತ್ವ ವಹಿಸಿದ್ದ ಪಕ್ಷದ ಸಮಸ್ತ ನಾಯಕರ ಶ್ರಮ ಯಶ ಕಂಡಿದೆ.
ಪಕ್ಷದ ನಾಯಕತ್ವ, ಆಡಳಿತ ಮತ್ತು ಸೈದ್ಧಾಂತಿಕ ನಿಲುವುಗಳನ್ನು ಬೆಂಬಲಿಸಿದ ಮೂರೂ ರಾಜ್ಯದ ಎಲ್ಲ ಮತದಾರರಿಗೆ ಅನಂತ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ