ಧಾರವಾಡ: ಇಲ್ಲಿನ ಬಸವರಾಜ ದುತ್ತಣ್ಣವರ ಎಂಬವರ ಮನೆ ಮೇಲೆ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ 18 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಇರುವ ಅರ್ನಾ ಅಪಾರ್ಟ್ಮೆಂಟ್ನಲ್ಲಿ ಬಸವರಾಜ್ ದುತ್ತಣ್ಣವರ ಎಂಬವರ ಮನೆ ಇದೆ. ಚುನಾವಣೆ ಹಿನ್ನೆಲೆ ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಟ್ಟ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಕ್ಷಿಪ್ರ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ
ಮನೆಯಲ್ಲಿ ಮದ್ಯ ಹುಡುಕುತ್ತಿದ್ದಾಗ ಅಲ್ಮೆರಾದಲ್ಲಿ ಹಣ ಪತ್ತೆಯಾಗಿದೆ. ಇದಕ್ಕೂ ಮೊದಲು ಮನೆಯಲ್ಲಿದ್ದ ವಿವಿಧ ಚೀಲಗಳಲ್ಲಿ ಮದ್ಯ ಹುಡುಕಿದ ಅಧಿಕಾರಿಗಳಿಗೆ ಮದ್ಯದ ಬಾಟ್ಲಿಗಳು ಸಿಗದೇ ಹೋದಾಗ ಅಲ್ಮೆರಾದಲ್ಲೂ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೃಹತ್ ಮೊತ್ತ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಎಸಿಪಿ ಬಸವರಾಜ ಹಾಗೂ ಇತರ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.