ಬೆಂಗಳೂರು:- ರಾಜ್ಯ ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆಯಾಗಿದ್ಯಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಆಡಿಯೋ ರೀಲಿಸ್ ಮಾಡಿದ್ದಕ್ಕೆ ವಕೀಲ ದೇವರಾಜೇಗೌಡ ಅರೆಸ್ಟ್ ಮಾಡಲಾಗಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ.
ಖಾಲಿ ಹೊಟ್ಟೆಯಲ್ಲಿ ಫ್ರೂಟ್ ಜ್ಯೂಸ್ ಕುಡಿಬಾರ್ದಂತೆ!.. ಯಾಕೆ ಗೊತ್ತಾ!?
ದೇವರಾಜೇಗೌಡರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏಪ್ರಿಲ್ 1ರಂದೇ ಎಫ್ಐಆರ್ ದಾಖಲಾಗಿತ್ತು. ಹಾಗಾದರೆ ಇಷ್ಟು ದಿನ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಏಪ್ರಿಲ್ 1ರಂದೇ ಎಫ್ಐಆರ್ ದಾಖಲಾಗಿದ್ದರೂ ಮೇ 10ರ ತನಕ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ, ಬ್ಲ್ಯಾಕ್ಮೇಲ್ ಮಾಡಿದ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪ ಅವರ ಮೇಲಿದೆ.ಏಪ್ರಿಲ್ 1ರಂದು ದಾಖಲಾಕಿದ್ದ ಎಫ್ಐಆರ್ನಲ್ಲಿ ಈವರೆಗೆ ಸಮಸ್ಯೆಗೆ ಸಿಲುಕದಿದ್ದ ದೇವರಾಜೇಗೌಡರಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದೇ ಮುಳುವಾಯ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹಳೆಯ ಕೇಸ್ನಲ್ಲಿ ಪೊಲೀಸರು ಅವರನ್ನು ಈಗ ಬಂಧಿಸಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ದೇವರಾಜೇಗೌಡ ಜಾಮೀನು ಅರ್ಜಿ ಸಲ್ಲಿಸಿದ ದಿನಾಂಕವನ್ನೂ ಗಮನಿಸಬೇಕು.
ಮಹಿಳೆ ಮೇಲಿನ ದೌರ್ಜನ್ಯ ಆರೋಪದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ದೇವರಾಜೇಗೌಡ ಮೇ 8ರಂದು ಹಾಸನದ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 15 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿತ್ತು. ಅಂದರೆ, ಪ್ರಜ್ವಲ್ ವಿಚಾರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ ನಂತರ ದೇವರಾಜೇಗೌಡ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರವಾಗಿ ಡಿಕೆ ಶಿವಕುಮಾರ್ ಜತೆಗೆ ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ದೇವರಾಜೇಗೌಡ ಬಿಡುಗಡೆ ಮಾಡಿದ್ದಾರೆ. ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡುವ ವಿಚಾರವಾಗಿ ತಮಗೆ ಹಲವು ಆಫರ್ಗಳನ್ನೂ ಡಿಕೆ ಶಿವಕುಮಾರ್ ಕಡೆಯಿಂದ ನೀಡಲಾಗಿತ್ತು ಎಂದೂ ಕೆಲವು ದಿನಗಳ ಹಿಂದೆ ಆರೋಸಿದ್ದರು. ಈ ಎಲ್ಲ ಬೆಳವಣಿಗೆಗಳಾದ ಬೆನ್ನಲ್ಲೇ ಅವರಿಗೆ ಬಂಧನದ ಸುಳಿವು ದೊರೆತಿರಬೇಕು. ಹೀಗಾಗಿ ಅವರು ಹಾಸನದಿಂದ ಬೇರೆಡೆಗೆ ಪಲಾಯನಗೈಯಲು ಮುಂದಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಹಿರಿಯೂರಿನಲ್ಲಿ ಬಂಧಿಸಲಾಗಿದೆ.
ಹೀಗಾಗಿ ದೇವರಾಜೇಗೌಡ ಬಂಧನದ ಒಟ್ಟು ಪ್ರಕರಣದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿವೆ