ಬೆಂಗಳೂರು:- ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಸಮರ ಸಾರಿರೋ ಶಾಸಕ ಬಸನಗೌಡ ಯತ್ನಾಳ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.. ವಿಜಯೇಂದ್ರರನ್ನ ಕೆಳಗಿಳಿಸೋಕೆ ಅಂತಾ ತಂಡ ಕಟ್ಕೊಂಡು ದೆಹಲಿಗೆ ಹೋಗಿದ್ದ ಯತ್ನಾಳ್ ವಾಪಸ್ ಬರ್ತಾ ವಿಜಯದ ಹಾರ ಕೈಯಲ್ಲಿ ಇಡ್ಕೊಂಡು ಬಂದಿದ್ದೀವಿ ಅಂದ್ರಿದ್ರು.. ಆದ್ರೆ ವಿಜಯದ ಮಾಲೆ ಅಂದ ಯತ್ನಾಳ್ ಕೈ ಸೇರಿದೆ ಶೋಕಾಸ್ ನೋಟಿಸ್.. ಇದಕ್ಕೆ ಯತ್ನಾಳ್ ಸಹ ಖಡಕ್ ಆಗೇ ತಿರುಗೇಟು ಕೊಟ್ಟಿದ್ದಾರೆ. ಹಾಗಿದ್ರೆ ಯತ್ನಾಳ್ ಶೋಕಾಸ್ ನೋಟಿಸ್ ಬಂದಿದ್ದು ನಿಜಾನ.. ಅವರ ಉತ್ತರ ಹೀಗಿದೆ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ: ರಿಜ್ವಾನ್ ಹರ್ಷದ್
ಹೌದು ಹೋಧಲ್ಲಿ ಬಂದಲ್ಲಿ ಮಾಜಿ, ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ ಯತ್ನಾಳ್… ಅದು ಅಲ್ದೇ ಕುಟುಂಬ ರಾಜಕಾರಣ ವಿರುದ್ದದ ಹೋರಾಟ ಅಂತಾ ವಿಜಯೆಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋಕೆ ಅಂತಲೂ ಶತ ಪ್ರಯತ್ನಗಳ ಮಾಡ್ತಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರಬಂಗಾಋರಪ್ಪ ಸೇರಿದಂತೆ ಕೆಲ ರೆಬಲ್ ಶಾಸಕರ ಜೊತೆಗೆ ಸೇರಿಸ್ಕೊಂಡು ದೆಹಲಿಗೂ ಹೋಗಿ ಹೈಕಮಾಂಡ್ ಕದ ತಟ್ಟಿ ಬಂದಿದ್ದಾರೆ.. ಈ ಬಾರಿ ರಾಜ್ಯಾಧ್ಯಕ್ಷರ ಅಯ್ಕೆಗೆ ಚುನಾವಣೆ ನಡೀಬೇಕು.. ಯಾವುದೇ ಸಮುದಾಯದವರಾದರೂ ರಾಜ್ಯಾಧ್ಯಕ್ಷರಾಗಲೀ ಆದರೆ ವಿಜಯೆಂದ್ರ ಬೇಡ ಅಂತಲೂ ಮುಂದಾಗಿದ್ರು. ವಿಜಯೇಂದ್ರ ಕೆಳಗಿಳಿಯೋದು ಶತ ಸಿದ್ದ ಅಂತಲ್ ಹೇಳ್ತಿದ್ರು.. ಆದ್ರೀ ಇದೀಗ ಯತ್ನಾಳ್ಗೆ ಹೈಕಮಾಂಡ್ ಶಾಕ್ ನೀಡಿದೆ..
ಎಸ್.. ಪಕ್ಷದ ನಾಯಕರ ವಿರುದ್ದ ಬಹಿರಂಗ ಹೇಳಿ ಕೊಡ್ತಿರೋ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಅಂತಾ ಹೇಳಿದ್ದೀರಿ, ಆದರೆ ಸಮಜಾಯಿಷಿ ನೀಡಿದ ರೀತಿಯಲ್ಲಿ ನೀವು ನಡೆದುಕೊಂಡಿಲ್ಲ ಎಂದು ಬಿಜೆಪಿ ಶಿಸ್ತುಸಮಿತಿ ಎರಡನೇ ಬಾರಿಗೆ ಶೋಕಾಸ್ ನೋಟಿಸ್ ನೀಡಿದೆ. ಈ ಮೂಲಕ ರೆಬಲ್ ಟೀಂಗೆ ಮತ್ತೊಂದು ನೋಟಿಸ್ ಕೊಡಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದು, ಯತ್ನಾಳ್ ಬಣವನ್ನು ಕೆರಳಿಸಿದೆ.
ಸದ್ಯ ಇದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರಿಸಿರೋ ಯತ್ನಾಳ್, ನನಗೆ ಇನ್ನೂ ಸಹ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಅಂತಾ ಪೋಸ್ಟ್ ಮಾಡಿದ್ದಾರೆ.
ಸದ್ಯ ತಮ್ಮ ವಿರುದ್ಧ ದನಿ ಎತ್ತಿರೋ ಯತ್ನಾಳ್ಗೆ ಮತ್ತೆ ಶಿಸ್ತುಕ್ರಮದಿಂದ ನೋಟಿಸ್ ನೀಡುವಲ್ಲಿ ವಿಜಯೇಂದ್ರ ಏನೋ ಯಶಸ್ವಿಯಾಗಿದ್ದಾರೆ. ಅದರೆ ಅವರ ಕೈ ಈ ವಿಷ್ಯದಲ್ಲಿ ಮಾತ್ರ ಮೇಲಾಗಿದೆ ಅಷ್ಟೆ. ಯಾಕೆಂದರೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕವನ್ನು ಹೈಕಮಾಂಡ್ ತಡೆ ಹಿಡಿದೆ. ಇದ್ರಿಂದ ಸುಧಾಕರ್ ಕೈ ಮೇಲಾಗಿದೆ. ಇತ್ತ ತಟಸ್ಥರಾಗಿರೋ ಕೆಲ ಬಿಜೆಪಿ ನಾಯಕರು ಯತ್ನಾಳ್ ಟೀಂ ಜೊತೆಗೆ ರಹಸ್ಯ ಸಭೆ ನಡೆಸಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಮತ್ಯಾವ ರೂಪ ತಗೊಳ್ಳುತ್ತೋ ಅಂತಾ ಕಾದು ನೋಡಬೇಕಿದೆ.