ಮಂಡ್ಯ: ಕುಮಾರಸ್ವಾಮಿ ಅಥವಾ ನಿಖಿಲ್ ಅಭ್ಯರ್ಥಿ ಆಗಬೇಕು. ಜಿಲ್ಲೆಯ ಶಾಸಕ, ಮಾಜಿ ಶಾಸಕರು ರೆಸಲ್ಯೂಷನ್ ಮಾಡಿದ್ದೇವೆ ಆದ್ದರಿಂದ ನೀವು ಅರ್ಜಿ ಹಾಕಿ, ನಾವು ಚುನಾವಣೆ ಮಾಡ್ತೀವಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.
ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನ!
ಕುಮಾರಸ್ವಾಮಿ ಹೊಟ್ಟೆಪಾಡಿಗಾಗಿ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಮನಸ್ಸು ಹೊಡೆದು. ದೇವೇಗೌಡರ ಆರೋಗ್ಯ ಕೆಡಿಸಿ ಬಿಜೆಪಿ ಜೊತೆ ಏಕೆ ಕರೆದುಕೊಂಡ ಹೋದೆ? ಮನೆ ಹೊಡೆದಂತ ನೀನು ಜೆಡಿಎಸ್ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ? ಎಂದು ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಸಿಎಸ್ ಪುಟ್ಟರಾಜು ತಿರುಗೇಟು ನೀಡಿದರು.