ಉಡುಪಿ: ಬಿಜೆಪಿಯ ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿಗೆ ನಂಬಿಸಿ ಚೈತ್ರಾ ಅಂಡ್ ಗ್ಯಾಂಗ್ ಪೀಕಿಸಿದ 5.50ಕೋಟಿ ರೂಪಾಯಿಯನ್ನು ಏನು ಮಾಡಿದೆ? ಯಾರೆಲ್ಲ ಎಷ್ಟೆಷ್ಟು ಹಂಚಿಕೊಂಡಿದ್ದಾರೆ ? ಎಲ್ಲೆಲ್ಲ ಈ ಹಣವನ್ನು ಇನ್ವೆಸ್ಟ್ ಮಾಡಲಾಗಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಈ ನಡುವೆ ಚೈತ್ರ ಗೆಳೆಯ ಮತ್ತು ಪ್ರಕರಣದ ಆರೋಪಿಯಾಗಿರುವ ಶ್ರೀಕಾಂತ್ ನಾಯಕ್ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ. ಈ ಜಮೀನು ಮತ್ತು ಅದರಲ್ಲಿ ಕಟ್ಟಿಸುತ್ತಿರುವ ಮನೆಗಾಗಿ ಒಂದು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಶ್ರೀಕಾಂತ್ ನಾಯಕ್ ಈ ಮನೆಯನ್ನು ಕಟ್ಟಿಸುತ್ತಿದ್ದಾನೋ ಅಥವಾ ಚೈತ್ರ ಕುಂದಾಪುರ ಇಲ್ಲಿ ಹೂಡಿಕೆ ಮಾಡಿದ್ದಾಳೋ ಎಂಬ ಬಗ್ಗೆಯೂ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಾತ್ರವಲ್ಲ ,ಜಿಲ್ಲೆಯ ಹಲವೆಡೆ ಈ ವಂಚಕ ತಂಡ ಗೌಪ್ಯವಾಗಿ ಆಸ್ತಿ ಖರೀಸಿರುವ ಮಾಹಿತಿ ಲಭಿಸಿದ್ದು ತನಿಖೆಯಿಂದ ಎಲ್ಲ ಸತ್ಯಾಂಶ ಹೊರ ಬರಲಿದೆ.
