ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ರವಿನಗರದ ಕರ್ನಾಟಕ ವೈನ್ಸ್ ಅಂಗಡಿಯ ವ್ಯವಸ್ಥಾಪಕ, ₹44.18 ಲಕ್ಷ ಮೌಲ್ಯದ ಮದ್ಯ ಮಾರಾಟದಲ್ಲಿ ಅವ್ಯವಹಾರ ನಡೆಸಿದ್ದಾನೆ ಎಂದು ಆರೋಪಿಸಿ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೈನ್ಸ್ ಅಂಗಡಿ ಮಾಲೀಕ ನೀಲಕಂಠ ಆಕಳವಾಡಿ ಅವರು ಪ್ರಿಯದರ್ಶಿನಿ ಕಾಲೊನಿಯ ಮಂಜುನಾಥ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ.
ಮಂಜುನಾಥ ಅವರು ವೈನ್ಸ್ ಅಂಗಡಿಯಲ್ಲಿ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದರು. 2017ರ ಸೆ. 5ರಿಂದ 2023ರ ಎ. 25ರವರೆಗೆ ನಡೆದ ಅಂಗಡಿಯ ಲೆಕ್ಕಪತ್ರಗಳ ವರದಿ ನೀಡದೆ ಓಡಿಹೋಗಿದ್ದರು. ಲೆಕ್ಕ ಪರಿಶೋಧನೆ ನಡೆಸಿದಾಗ ಮದ್ಯ ಮಾರಾಟದಲ್ಲಿ ಅವ್ಯವಹಾರ ನಡೆದಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.