IPL ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇದ್ದು, ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ.
Actor Vijay’s TVK: ಕೇಂದ್ರದ’ ಒಂದು ರಾಷ್ಟ್ರ, ಒಂದು ಚುನಾವಣೆ: ವಕ್ಫ್ ತಿದ್ದುಪಡಿ ಮಸೂದೆಗೆ TVK ವಿರೋಧ!
ಕೆಲವು ಫ್ರಾಂಚೈಸಿಗಳು ಬಿಸಿಸಿಐ ರೂಪಿಸಿದ್ದ ಧಾರಣ ನಿಯಮವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಿದ್ದವು. ಇದೀಗ ಆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಮೆಗಾ ಹರಾಜಿನತ್ತ ನೆಟ್ಟಿದೆ.
ಏಕೆಂದರೆ ಮೆಗಾ ಹರಾಜಿನಲ್ಲಿ ತಂಡಕ್ಕೆ ಅವಶ್ಯಕವಾದ ಆಟಗಾರರನ್ನು ಖರೀದಿಸುವುದು ಈ ಫ್ರಾಂಚೈಸಿಗಳ ಪ್ರಮುಖ ಗುರಿಯಾಗಿದೆ. ಇದೀಗ ಐಪಿಎಲ್ ಮೆಗಾ ಹರಾಜಿಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಹೊರಬಿದ್ದಿದ್ದು, ಬಿಸಿಸಿಐ ಈ ಬಾರಿಯ ಐಪಿಎಲ್ ಹರಾಜಿಗೆ ಸ್ಥಳವನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ.
ಐಪಿಎಲ್ 2025 ರ ಮೆಗಾ ಹರಾಜು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ, ಬಿಸಿಸಿಐ ಲಂಡನ್ ಅಥವಾ ಸೌದಿಯಲ್ಲಿ ಹರಾಜು ಆಯೋಜಿಸಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೆ ಇದೀಗ ಬಿಸಿಸಿಐ, ರಿಯಾದ್ನಲ್ಲಿ ಹರಾಜು ನಡೆಸಲು ತೀರ್ಮಾನಿಸಿದೆ. ಇದೀಗ ಇದರ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ
ಐಪಿಎಲ್ 2025 ರ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಆದರೆ ಇದನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ. ಆದರೆ ನವೆಂಬರ್ 24 ಮತ್ತು 25 ಈ ಎರಡು ದಿನಗಳಲ್ಲಿ ಮೆಗಾ ಹರಾಜು ನಡೆಸಲಲು ಬಹುತೇಕ ತೀರ್ಮಾನಿಸಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಹಲವು ಸ್ಟಾರ್ ಆಟಗಾರರು ಭಾಗವಹಿಸಲಿದ್ದಾರೆ.