ಅಂದುಕೊಂಡಂತೆ ಲಕ್ನೋ ತಂಡದಿಂದ ಕನ್ನಡಿಗ ರಾಹುಲ್ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಐಪಿಎಲ್ ಸೀಸನ್-18 ರ ಮೆಗಾ ಹರಾಜಿನಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ಕನ್ಫರ್ಮ್. ಇನ್ನು LSG ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರುವ 5 ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
Basavaraj Bommai: ನೀವು ಕೊಟ್ಟ ಮನವಿಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ: ಬಸವರಾಜ್ ಬೊಮ್ಮಾಯಿ
ನಿಕೋಲಸ್ ಪೂರನ್: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಮೊದಲ ರಿಟೈನ್ ಆಗಿ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಪೂರನ್ಗೆ 21 ಕೋಟಿ ರೂ. ನೀಡಲು ಎಲ್ಎಸ್ಜಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಮಯಾಂಕ್ ಯಾದವ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಎರಡನೇ ರಿಟೈನ್ ಯುವ ವೇಗಿ ಮಯಾಂಕ್ ಯಾದವ್. ಟೀಮ್ ಇಂಡಿಯಾ ಆಟಗಾರನನ್ನು ಎಲ್ಎಸ್ಜಿ 11 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.
ರವಿ ಬಿಷ್ಣೋಯ್: ಎಲ್ಎಸ್ಜಿ ಫ್ರಾಂಚೈಸಿಯ ಮೂರನೇ ರಿಟೈನ್ ಯುವ ಸ್ಪಿನ್ನರ್ ರವಿ ಬಿಷ್ಣೋಯ್. ಕಳೆದ ಮೂರು ಸೀಸನ್ಗಳಿಂದ ಲಕ್ನೋ ತಂಡದ ಭಾಗವಾಗಿರುವ ಬಿಷ್ಣೋಯ್ ಅವರನ್ನು 11 ಕೋಟಿ ರೂ.ಗೆ ಎಲ್ಎಸ್ಜಿ ತಂಡದಲ್ಲೇ ಉಳಿಸಿಕೊಂಡಿದೆ.
ಆಯುಷ್ ಬದೋನಿ: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ಆಟಗಾರ ಆಯುಷ್ ಬದೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ ಯುವ ಆಟಗಾರನಿಗೆ 4 ಕೋಟಿ ರೂ. ನೀಡಲಿದೆ.
ಮೊಹ್ಸಿನ್ ಖಾನ್: ಎಲ್ಎಸ್ಜಿ ಫ್ರಾಂಚೈಸಿಯು ಎಡಗೈ ವೇಗಿ ಮೊಹ್ಸಿನ್ ಖಾನ್ ಅವರನ್ನು ಸಹ 4 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ