ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ರಿಷಬ್ ಪಂತ್ಗೆ (Rishabh Pant) 2024ರ ಐಪಿಎಲ್ಗೂ ಮುನ್ನವೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಫಿಟ್ನೆಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ನೀಡಿದೆ. ಈ ಮೂಲಕ ಐಪಿಎಲ್ 2024ರಲ್ಲಿ (IPL 2024) ಆಡಲು ಅವರು ಅರ್ಹರಾಗಿದ್ದಾರೆ.
ಆದರೂ ಆದ್ರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾತ್ರ ಗೊಂದಲದ ಗೂಡಾಗಿದೆ. ನಾಯಕ ಯಾರು ನಮ್ಮ ಟೀಮಿಗೆ ಅನ್ನೋ ಪ್ರಶ್ನೆ ತಂಡವನ್ನ ಕಾಡ್ತಿದೆ.
Bigg News: ಚುನಾವಣಾ ಆಯುಕ್ತ ಅರುಣ್ ಗೋಯೆಲ್ ದಿಢೀರ್ ರಾಜೀನಾಮೆ: ಕಾರಣ ಏನು?
ಕಳೆದ ಮಾರ್ಚ್ 5ರಂದು ಬೆಂಗಳೂರಿನ ಎನ್ಸಿಎನಲ್ಲಿ ರಿಷಭ್ ಪಂತ್ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ರು. ಈ ಟೆಸ್ಟ್ನಲ್ಲಿ ಪಂತ್ ಪಾಸಾದ್ರೆ, ಐಪಿಎಲ್ ಆಡೋದು ಕನ್ಫರ್ಮ್. ಫೇಲಾದ್ರೆ, ಪಂತ್ ಐಪಿಎಲ್ನಿಂದ ಔಟ್. ಹೀಗಾಗಿ, ಈ ಫಿಟ್ನೆಸ್ ಟೆಸ್ಟ್ನ ರಿಸಲ್ಟ್ ಸದ್ಯ ಕ್ರಿಕೆಟ್ ಲೋಕದ ಕುತೂಹಲ ಹೆಚ್ಚಿಸಿದೆ. ಆದ್ರೆ, ಈ ಫಿಟ್ನೆಸ್ ಟೆಸ್ಟ್ನ ರಿಪೋರ್ಟ್ ನಿಗೂಢ ರಹಸ್ಯವಾಗುಳಿದಿದೆ. ಟ್ವಿಸ್ಟ್ & ಟರ್ನ್ಗಳು ಜೋರಾಗಿವೆ.
ಬೆಳಗ್ಗೆ ಬಂದ ಸುದ್ದಿ ಸಂಜೆಯಾಗೋದ್ರೊಳಗೆ ಮಗ್ಗಲು ಬದಲಿಸಿ ಬಿಟ್ಟಿದೆ. ಫಿಟ್ನೆಸ್ ಟೆಸ್ಟ್ನಲ್ಲಿ ಪಂತ್ ಪಾಸ್ ಎಂಬ ಸುದ್ದಿ ಸದ್ಯ ಕ್ರಿಕೆಟ್ ಲೋಕದಲ್ಲಿ ಹರಿದಾಡ್ತಿದೆ. ಎನ್ಸಿಎ ಕೂಡ ಐಪಿಎಲ್ ಆಡಲು ಪಂತ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಅನ್ನೋ ಸುದ್ದಿಯನ್ನ ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳು ದೃಢಪಡಿಸಿವೆ. ಇಷ್ಟೇ ಅಲ್ಲ.. ಫಿಟ್ ಆಗಿರೋ ಪಂತ್ರೇ ಈ ಬಾರಿ ನಮ್ಮ ಸಾರಥಿ ಅಂತಾ ಫ್ರಾಂಚೈಸಿಯ ಮೂಲಗಳು ಹೇಳ್ತಿವೆ.