ಮುಂಬೈ: ಕಳೆದ ಆವೃತ್ತಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂದಿನ ಐಪಿಎಲ್ ಗಾಗಿ ಭರ್ಜರ ಸಿದ್ಧತೆ ನಡೆಸುತ್ತಿದ್ದು, ಬ್ರಿಯಾನ್ ಲಾರಾ ಮತ್ತು ಡೇಲ್ ಸ್ಟೇನ್ ತಂಡವನ್ನು ಕೂಡಿಕೊಂಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ತಂಡದ ನೂತನ ಕೋಚಿಂಗ್ ಸ್ಟಾಫ್ ನ ವಿವರವನ್ನು ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಬ್ಯಾಟಿಂಗ್ ಕೋಚ್ ಆಗಿ ಮತ್ತು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ವೇಗದ ಬೌಲಿಂಗ್ ಕೋಚ್ ಆಗಿ ಸೇರ್ಪಡೆಯಾಗಿದ್ದಾರೆ.
ಉಳಿದಂತೆ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರೆ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಹೆಡ್ ಕೋಚ್ ಆಗಿದ್ದಾರೆ ಮತ್ತು ಸೈಮನ್ ಕಾಟಿಚ್ ಸಹಾಯಕ ಕೋಚ್ ಆಗಿರಲಿದ್ದಾರೆ. ಉಳಿದಂತೆ ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ ಆಗಿರಲಿದ್ದಾರೆ.

Introducing the new management/support staff of SRH for #IPL2022!
Orange Army, we are #ReadyToRise! 🧡@BrianLara #MuttiahMuralitharan @TomMoodyCricket @DaleSteyn62 #SimonKatich @hemangkbadani pic.twitter.com/Yhk17v5tb5
— SunRisers Hyderabad (@SunRisers) December 23, 2021
ಮುಂದಿನ ಸೀಸನ್ ಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ (14 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ) ಮತ್ತು ಅಬ್ದುಲ್ ಸಮದ್ (4 ಕೋಟಿ) ಅವರನ್ನು ರಿಟೇನ್ ಮಾಡಿತ್ತು. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಲಿಷ್ಠ ತಂಡ ಕಟ್ಟಲು ಹೈದರಾಬಾದ್ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ.