ಬೆಂಗಳೂರು: ಕೋವಿಡ್ ಬಗ್ಗೆ ಡಿಕೆಶಿ ಅವರಿಗೆ ಮಾಹಿತಿ ಕೊರತೆ ಇದೆ ಎಂದು ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟ್ ದರ ಶೇಕಡಾ 2 ರಷ್ಟು ಸಹ ಇಲ್ಲ. ಸರ್ಕಾರದ್ದು ಸುಳ್ಳು ಲೆಕ್ಕ ಎಂಬ ಡಿ.ಕೆ ಶಿವಕುಮಾರ್ ಆರೋಪಕ್ಕೆ ಬೆಂಗಳೂರಿನಲ್ಲಿ ಸಚಿವ ಡಾ.ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ. ಕೊವಿಡ್ ಬಗ್ಗೆ ಡಿಕೆಶಿಗೆ ಮಾಹಿತಿಯ ಕೊರತೆ ಇದ್ದು, ಡಿಕೆಶಿ ಆರೋಪಕ್ಕೆ ನಾನು ಏನೂ ಮಾತಾಡಲ್ಲ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ.
ಇನ್ನೂ ಇಡೀ ವಿಶ್ವದಲ್ಲಿ ಯಾವ ವಿರೋಧ ಪಕ್ಷವೂ ಸರ್ಕಾರದ ಕೊವಿಡ್ ನಿಯಂತ್ರಣ ಟೀಕಿಸಿಲ್ಲ. ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ. ಎಲ್ಲ ಕಡೆಯೂ ವಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಿವೆ. ಆದರೆ ನಮ್ಮಲ್ಲಿ ವಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ಇಂಥಹ ಸಮಯದಲ್ಲಿ ರಾಜಕಾರಣ ಸರಿಯಲ್ಲ. ಅವರನ್ನು ಜನ ನೋಡುತ್ತಿದ್ದಾರೆ ಎಂದು ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
