ಸೀತಾಫಲ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ನಿಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಶಿಯಮ್ ಮತ್ತು ಮೆಗ್ನೀಶಿಯಮ್ ಕೂಡಾ ಅಧಿಕವಾಗಿದ್ದು ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ.ಸೀತಾಫಲದಲ್ಲಿ ವಿಟಮಿನ್ ಎ ಅಂಶವಿರುತ್ತದೆ.
ಇದು ನಿಮ್ಮ ತ್ವಚೆ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಕಬ್ಬಿಣಾಂಶವನ್ನು ಪಡೆದುಕೊಳ್ಳಬಹುದು. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅತಿಸಾರ, ಬೇಧಿ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

- ಹೊಟ್ಟೆ ಉರಿ ಸಮಸ್ಯೆ ಕಂಡು ಬಂದರೆ ಸೀತಾಫಲ ಜ್ಯೂಸ್ ಸೇವಿಸಿ.
- ಸೀತಾಫಲದ ಎಲೆಗಳನ್ನು ಚೆನ್ನಾಗಿ ರುಬ್ಬಿ ಕುರು, ಕಜ್ಜಿಗಳಿಗೆ ಹಚ್ಚಿದರೆ ಬೇಗ ಗುಣವಾಗುತ್ತದೆ.
- ಹಿಮೋಗ್ಲೋಬಿನ್ ಹೆಚ್ಚಾಗಲು ಸೀತಾಫಲ ಸೇವಿಸಿ.
- ಈ ಗಿಡದ ತೊಗಟೆಯನ್ನು ಜಜ್ಜಿ ಆ ರಸವನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮುಕಡಿಮೆಯಾಗುತ್ತದೆ.
- ಇದರ ಎಲೆ ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಬೇಗ ಗುಣವಾತ್ತದೆ.
- ಸೀತಾಫಲ ತೊಗಟೆ ಕಷಾಯ ಮಾಡಿ ಕುಡಿದರೆ ಬೇಧಿ, ಆಮಶಂಕೆ ಸಮಸ್ಯೆಗೆ ರಾಮಬಾಣ.
- ಹಣ್ಣಿನ ಸಿಪ್ಪೆಯಿಂದ ಕಷಾಯ ತಯಾರಿಸಿ, ಸೇವಿಸಿದರೆ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.
- ಈ ಕಷಾಯ ಸೇವಿಸಿದರೆ ಮಹಿಳೆಯರ ಋತುಸ್ರಾವ ಸಮಸ್ಯೆಗೂ ಮದ್ದು.
- ನಿರಂತರವಾಗಿ ಈ ಹಣ್ಣನ್ನು ಸೇವಿಸದರೆ ಹಲ್ಲು ಮತ್ತು ದವಡೆ ಸಮಸ್ಯೆ ನಿವಾರಣೆಯಾಗುತ್ತದೆ.