ಧಾರವಾಡ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಇಂದಿರಮ್ಮನ ಕೆರೆ ಭರ್ತಿಯಾಗಿರಲಿಲ್ಲ. ಆದರೆ, ಕಳೆದ 10-15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದಿರಮ್ಮನ ಕೆರೆ ಭರ್ತಿಯಾಗಿದ್ದು, ಹೆಚ್ಚಿನ ನೀರು ಹೊರ ಹೋಗುತ್ತಿದೆ.
Government: “ಗ್ಯಾರಂಟಿ ಸಮಿತಿ ಪದಾಧಿಕಾರಿ”ಗಳಿಗೆ ವೇತನ, ಭತ್ಯೆ ನಿಗದಿಪಡಿಸಿ ಸರ್ಕಾರ ಆದೇಶ..!
ಬೆಳಗಾವಿ ಜಿಲ್ಲೆಯ ಖಾನಾಪುರ ಹಾಗೂ ಧಾರವಾಡ ಜಿಲ್ಲೆಯ ಗಡಿ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೆರೆ ತುಂಬಿ ತಡೆಗೋಡೆ ದಾಟಿ ನೀರು ಹೊರಗಡೆ ಹೋಗುತ್ತಿದ್ದು, ಈ ನೀರು ಅಳ್ನಾವರ ಡವಗಿ ನಾಲಾಕ್ಕೆ ಹೋಗಿ ಸೇರಲಿದೆ. ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಕೆರೆ ಇದ್ದು, ಇದೀಗ ಈ ಕೆರೆ ಭರ್ತಿಯಾಗಿದೆ. ಸದ್ಯ ಕೆರೆ ತುಂಬಿದ್ದನ್ನು ನೋಡಲು ನೂರಾರು ಜನರು ಕೆರೆ ಬಳಿ ಬರುತ್ತಿದ್ದು, ಪೊಲೀಸ್ ಭದ್ರತೆಯನ್ನು ಕೂಡ ನಿಯೋಜಿಸಲಾಗಿದೆ.