ಬೀಜಿಂಗ್: ತನ್ನ ದೇಶದ ಮೊಬೈಲ್ ಕಂಪನಿಯಾದ ‘ವಿವೋ’ ವಿರುದ್ಧ ಭಾರತದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇ.ಡಿ.), 62,476 ಕೋಟಿ ರು. ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನ್ನ ಇಬ್ಬರು ನಾಗರಿಕರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಕ್ಕೆ ಚೀನಾ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಚೀನಾ ಮೂಲದ ಕಂಪನಿಗಳ ಬಗ್ಗೆ ಭಾರತ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಕೂಡದು ಎಂದು ಎಚ್ಚರಿಸಿರುವ ಚೀನೀ ವಿದೇಶಾಂಗ ಸಚಿವಾಲಯ,
ದಿಗಂತ್’ಗೆ ಕಿಚ್ಚ ಸಾಥ್..! ”ಎಡಗೈ ಅಪಘಾತಕ್ಕೆ ಕಾರಣ” ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ತನ್ನ ಬಂಧಿತ ಇಬ್ಬರು ನಾಗರಿಕರಿಗೆ ರಾಜತಾಂತ್ರಿಕ ಸಂಪರ್ಕ ನೀಡಲು ನಿರ್ಧರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಮಾವೋ ನಿಂಗ್, ವಿವೋ ಕಂಪನಿಯ ಬೆನ್ನಿಗೆ ಚೀನಾ ನಿಲ್ಲುತ್ತದೆ. ಭಾರತವು ನಮ್ಮ ಕಂಪನಿ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಬಾರದು. ನಮ್ಮ ಬಂಧಿತ ಇಬ್ಬರು ನಾಗರಿಕರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ನಮ್ಮ ಭಾರತದಲ್ಲಿನ ರಾಯಭಾರಿಗೆ ಸೂಚಿಸಲಾಗಿದೆ ಎಂದಿದ್ದಾರೆ.