ಪೇಜರ್ ಸ್ಪೋಟದ ಬೆನ್ನಲ್ಲೇ ಅಲರ್ಟ್ ಆದ ಭಾರತ: ಚೀನಾಗೆ ಶಾಕ್ ಕೊಡಲು ಸಿದ್ಧತೆ

ಲೆಬನಾನ್‌ನಲ್ಲಿ ಇತ್ತೀಚೆಗೆ ಸಂಘಟಿತ ಪೇಜರ್ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು ಹಲವರು ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಭಾರತ ಸರ್ಕಾರ ವಿದೇಶದಲ್ಲಿ ಸಿದ್ಧವಾದ ಇಂಥ ಉಪಕರಣಗಳು ಭಾರತದ ಭದ್ರತೆಯ ಮೇಲೆ ದುಷ್ಪರಿಣಾಮ ಬೀರಬಲ್ಲವು ಎಂದು ಅನುಮಾನ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ಸಿಸಿ ಕ್ಯಾಮೆರಾದಂಥ ‘ಕಣ್ಗಾವಲು ಮಾರುಕಟ್ಟೆ’ಯಲ್ಲಿ ವಿದೇಶಿ ಉಪಕರಣಗಳ ಮೇಲೆ ನಿರ್ಬಂಧ/ನಿಯಂತ್ರಣ ಹೇರಲು ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ಪೇಜರ್ ಸ್ಫೋಟಗಳ ಬಳಿಕ ಭಾರತ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಿದೆ. ಸರ್ಕಾರದ ಕಣ್ಗಾವಲು ಕ್ಯಾಮೆರಾ ನೀತಿಯು … Continue reading ಪೇಜರ್ ಸ್ಪೋಟದ ಬೆನ್ನಲ್ಲೇ ಅಲರ್ಟ್ ಆದ ಭಾರತ: ಚೀನಾಗೆ ಶಾಕ್ ಕೊಡಲು ಸಿದ್ಧತೆ