ಧಾರವಾಡ: ನಾಳೆ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ 2023ರ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯಲಿದ್ದು, ಉಭಯ ತಂಡಗಳಿಗೆ ಶುಭಾಶಯಗಳ ಮಾಹಾ ಪೂರವೆ ಹರಿದು ಬರುತ್ತಿದೆ. ಹಾಗೇ ಧಾರವಾಡದಲ್ಲೊಬ್ಬರು ಕಲಾವಿದ ಮಣ್ಣಿನಲ್ಲಿ 23 ಸೆ.ಮೀ. ಎತ್ತರದ ವಿಶ್ವಕಪ್ ಮಾಡುವ ಮೂಲಕ ವಿಶೇಷವಾಗಿ ಟೀಂ ಇಡೊಯಾಗೆ ಶುಭ ಹಾರೈಸಿದ್ದಾರೆ.
ಧಾರವಾಡ ಪರಿಸರ ಸ್ನೇಹಿ ಕಲಾವಿದರಾದ ಮಂಜುನಾಥ ಹಿರೇಮಠ ಅವರು, 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್ನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನ ಸೆಳೆಯುವುದಿದ್ದಾರೆ. ಇನ್ನೂ ಮಣ್ಣಿನನಲ್ಲಿ ಸಿದ್ಧವಾದ 23 ಸೆ.ಮಿ ಎತ್ತರದ ವಿಶ್ವಕಪ್ ಥೇಟ್ ವಿಶ್ವಕಪ್ನಂತೆಯೇ ಕಾಣಿತ್ತಿದ್ದು, ಗೆದ್ದು ಬಾ ಟೀಂ ಭಾರತ ಎಂದು ಹೇಳುವ ಮೂಲಕ ಭಾರತ ತಂಡವನ್ನು ಹಾರೈಸಿದ್ದಾರೆ.
ಇನ್ನೂ ಮಂಜುನಾಥ ಹಿರೇಮಠ ಅವರು ವಿಶೇಷ ವ್ಯಕ್ತಿಗಳು ಹುಟ್ಟು ಹಬ್ಬ ಹಾಗೂ ದೇಶದ ವಿಶೇಷ ಸಾಧನೆಗಳು ನಡೆದಾಗ ತಮ್ಮ ಕೈ ಚಳಕದಿಂದಲೇ ವಿಶೇಷವಾಗಿ ಏನಾದರೂ ಒಂದು ಮಾಡಿ ಶುಭ ಹಾರೈಸಿತ್ತಲೇ ಬದಿದ್ದು, ಈಗ ವಿಶ್ವಕ್ನ್ನು ಮಣ್ಣಿನಲ್ಲಿ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.