ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿ ಇಂದು ಭಾರತ ಹಾಗೂ ನ್ಯೂಝಿಲೆಂಡ್ ತಂಡ ಮುಖಮುಖಿ ಆಗುತ್ತಿದೆ.
Champion Trophy Final IND Vs NZ: ಟೀಮ್ ಇಂಡಿಯಾ ಪಾಲಿಗೆ ಸಂಡೇ ಬ್ಯಾಡ್ ಡೇ!
ಆದರೆ ಅಶ್ಲಿನ್ ಅವರು ಹೇಳಿದ ಒಂದು ಹೇಳಿಕೆ ಎಲ್ಲರನ್ನೂ ಕನ್ಫೂಸ್ ಮಾಡಿದೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ಪಂದ್ಯಗಳಲ್ಲಿ ಸತತ 11 ಟಾಸ್ಗಳನ್ನು ಸೋತಿದ್ದಾರೆ. ಈ ಸರಣಿಯು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ನಲ್ಲಿಯೂ ಮುಂದುವರಿಯಲಿ ಎಂದು ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಯಸುತ್ತಾರೆ.
ರೋಹಿತ್ ಟಾಸ್ ಅನ್ನು ಸೋಲಬೇಕು. ಈ ಮೂಲಕ ಕಿವೀಸ್ ತಂಡವು ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕೇ ಅಥವಾ ಬೌಲಿಂಗ್ ಮಾಡಬೇಕೇ ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಅವರಿಗೆ ನೀಡಬೇಕೆಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ನಡೆದಿರುವ ಪಂದ್ಯಗಳಲ್ಲಿ ಭಾರತ ತಂಡವು ಯಶಸ್ವಿಯಾಗಿ ಡಿಫೆಂಡ್ ಮತ್ತು ಚೇಸಿಂಗ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಹೀಗಾಗಿ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೂ ಅಥವಾ ಬೌಲಿಂಗ್ ಮಾಡಿದರೂ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಅಶ್ವಿನ್, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಫೈನಲ್ ಕಾದಾಟದಲ್ಲಿ ರೋಹಿತ್ ನೇತೃತ್ವದ ತಂಡ ಗೆಲ್ಲುವ ಫೆವರಿಟ್ ಆಗಿದೆ. ಆದರೆ ನ್ಯೂಜಿಲೆಂಡ್ ತಂಡವನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಬಾರದು ಎಂದು ಅವರು ಎಚ್ಚರಿಸಿದ್ದಾರೆ.
“ನನ್ನ ಪ್ರಕಾರ, ಭಾರತ ತಂಡವು ಟಾಸ್ ಗೆಲ್ಲುವ ಬಗ್ಗೆ ಹೆಚ್ಚು ಚಿಂತಿಸಬಾರದು. ಅವರು ಟಾಸ್ ಸೋತು ನ್ಯೂಜಿಲೆಂಡ್ ತಂಡಕ್ಕೆ ಮೊದಲು ಏನು ಮಾಡಬೇಕೆಂದು ನಿರ್ಧರಿಸುವ ಅವಕಾಶವನ್ನು ನೀಡಲಿ. ಇದು ಭಾರತ ತಂಡಕ್ಕೆ ಒಂದು ಸವಾಲನ್ನು ಒಡ್ಡಬಹುದು. ಆದರೆ ಈಗಾಗಲೇ ನಡೆದಿರುವ ಪಂದ್ಯಗಳಲ್ಲಿ ಭಾರತ ತಂಡವು ಯಶಸ್ವಿಯಾಗಿ ಡಿಫೆಂಡ್ ಮತ್ತು ಚೇಸಿಂಗ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಹೀಗಾಗಿ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೂ ಅಥವಾ ಬೌಲಿಂಗ್ ಮಾಡಿದರೂ ಭಾರತ ತಂಡವು ಆತ್ಮವಿಶ್ವಾಸದಿಂದ ಕಣಕ್ಕಿಳಿಯಬಹುದು” ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ ನಲ್ಲಿ ಹೇಳಿದ್ದಾರೆ.