ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ದೆಹಲಿ ಮಾದರಿಯಲ್ಲಿ ಕ್ರಮ ಕೈಗೊಳ್ಳಲು ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ 140ರಿಂದ 200ರ ಒಳಗೆ ಪತ್ತೆಯಾಗುತ್ತಿದ್ದ ಕೇಸ್ಗಳು ಇದೀಗ 800-850ಕ್ಕೆ ಏರಿಕೆಯಾಗಿದೆ. ಹೀಗಾಗಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ ಅಂತ ತಜ್ಞರು ಸೂಚನೆ ನೀಡಿದ್ದಾರೆ.
ಯಾವ ಯಾವ ಚಟುವಟಿಕೆಗಳಿಗೆ ಯಾವಾಗಾ ನಿರ್ಬಂಧ ಹೇರಬೇಕು ಎಂಬುದನ್ನ ನಿರ್ಧರಿಸಲು ಕಲರ್ ಕೋಡ್ ಸಿದ್ಧಪಡಿಸಲು ತಜ್ಞರು ಶಿಫಾರಸ್ಸು ಮಾಡುತ್ತಿದ್ದು, ಕೊವಿಡ್ ಪಾಸಿಟಿವ್ ರೇಟ್ ಶೇ.1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, ಶೇ.1ರಿಂದ 2ರಷ್ಟು ಇದ್ದರೆ ಆರೆಂಜ್, 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲು ಕಲರ್ ಕೋಡ್ ಬಳಸಲು ಸೂಚಿಸಿದ್ದಾರೆ. ಇದೇ ಮಾದರಿಯನ್ನ ದೆಹಲಿಯಲ್ಲೂ ಅನುಸರಿಸಲಾಗುತ್ತಿದ್ದು, ಕರ್ನಾಟಕದಲ್ಲೂ ಈ ಕ್ರಮ ಅನುಸರಿಸುವಂತೆ ತಜ್ಞರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
