ಇಸ್ಲಮಾಬಾದ್: ಹೆಚುತ್ತಿರುವ ಆರ್ಥಿಕ ಸವಾಲುಗಳ ನಡುವೆ ಪಾಕಿಸ್ತಾನ (Pakistan) ಪೆಟ್ರೋಲ್ (Petrol) ಮತ್ತು ಹೈಸ್ಪೀಡ್ ಡೀಸೆಲ್ (Highspeed Diesel) ಬೆಲೆಯನ್ನು ಏರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ (Price Hike) ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 26.02 ಪಿಕೆಆರ್ (ಅಂದಾಜು 7.28 ರೂ.) ಏರಿಕೆ ಮಾಡಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 17.34 ಪಿಕೆಆರ್ (ಅಂದಾಜು 4.85 ರೂ.) ಏರಿಕೆ ಮಾಡಿದೆ.
ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?
ಪಾಕಿಸ್ತಾನದಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 333.38 ಪಿಕೆಆರ್ (ಅಂದಾಜು 93.26 ರೂ.) ಮಾರಾಟ ಮಾಡುತ್ತಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 329.18 ಪಿಕೆಆರ್ (ಅಂದಾಜು 92.09 ರೂ.) ಆಗಿದೆ. ಇತ್ತೀಚಿನ ಆರ್ಥಿಕ ಸುಧಾರಣೆಗಳಿಂದ ಐತಿಹಾಸಿಕವಾಗಿ ಹೆಚ್ಚಿನ ಹಣದುಬ್ಬರ ಮತ್ತು ಬಡ್ಡಿದರಗಳ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ವಿದ್ಯುತ್ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ. ಈ ಬದಲಾವಣೆಗಳು ಸಾಮಾನ್ಯ ನಾಗರಿಕರು ಮತ್ತು ವ್ಯವಹಾರಗಳ ಮೇಲೆ ಗಮನಾರ್ಹ ಒತ್ತಡವನ್ನು ಉಂಟುಮಾಡುತ್ತದೆ.
